ಸಾಂದರ್ಭಿಕ ಚಿತ್ರ 
ದೇಶ

ಆಲ್ವಾರ್ ಸಾಮೂಹಿಕ ಹಲ್ಲೆ ಪ್ರಕರಣ: ಬಂಧಿತ ಗೋಸಂರಕ್ಷಕರನ್ನು ಬಿಡುಗಡೆಗೊಳಿಸುವಂತೆ ಬಿಜೆಪಿ ಶಾಸಕನ ಆಗ್ರಹ

ಆಲ್ವಾರ್ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಬಂಧಿರಾಗಿರುವ ಗೋಸಂರಕ್ಷಕರನ್ನು ಬಿಡುಗಡೆಗೊಳಿಸುವಂತೆ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ..

ರಾಜಸ್ತಾನ: ಆಲ್ವಾರ್ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಬಂಧಿರಾಗಿರುವ ಗೋಸಂರಕ್ಷಕರನ್ನು ಬಿಡುಗಡೆಗೊಳಿಸುವಂತೆ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಆಗ್ರಹಿಸಿದ್ದಾರೆ. 
ಹಸು ಸಾಗಿಸುತ್ತಿದ್ದ ಎಂಬ ಶಂಕೆಯ ಮೇಲೆ 28 ವರ್,ದ ರಕ್ಬರ್ ಖಾನ್ ಮೇಲೆ ಹಲ್ಲೆ ನಡೆಸಲಾಗಿತ್ತು. ನಂತರ ಆತ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಹೀಗಾಗಿ ಪ್ರಕರಣವನ್ನು ಕಸ್ಟೋಡಿಯಲ್ ಡೆತ್ ಎಂದು ಪರಿಗಣಿಸಿ  ನ್ಯಾಯಾಂಗ ತನಿಖೆ ನಡೆಸುವಂತೆ ಗೃಹ ಸಚಿವ ಗುಲಬ್ ಚಂದ್ ಕಟಾರಿಯಾ ಆದೇಶಿಸಿದ್ದರು.
ರಕ್ಬರ್ ಖಾನ್ ಜನರ ಹಲ್ಲೆಯಿಂದ ಸಾವನ್ನಪ್ಪಿಲ್ಲ, ಆತ ಪೊಲೀಸರ ವಶದಲ್ಲಿದ್ದಾಗ ಸತ್ತಿದ್ದಾನೆ, ಹೀಗಾಗಿ ಮುಗ್ಧರನ್ನು ಏಕೆ ಪೊಲೀಸರು ಬಂಧಿಸಬೇಕು, ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಅಹುಜಾ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ. 
ಕೂಡಲೇ ಬಂಧಿರನ್ನು ಬಿಡುಗಡೆಗೊಳಿಸಬೇಕು ಎಂದಿರುವ ಶಾಸಕ ಅಹುಜಾ ಗೋಕಳ್ಳಸಾಗಣಿಕೆಯಲ್ಲಿ ತೊಡಗಿದ್ದ ಅಸ್ಲಾಂನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ತಮಿಳುನಾಡು ಸಿಎಂ ವಿಜಯ್- ಪ್ರಧಾನಿ ಭೇಟಿ: 2 ದೊಡ್ಡ ಬೇಡಿಕೆ; ಇಲ್ಲಿದೆ ವಿವರ

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಅಸ್ಸಾಂ ವಿಧಾನಸಭೆಯಲ್ಲಿ ಹೈಡ್ರಾಮ: ವಿಪಕ್ಷಗಳ ಪ್ರತಿಭಟನೆ ನಡುವೆಯೇ UCC ಮಸೂದೆ ಅಂಗೀಕಾರ! ಬಹು ಪತ್ನಿತ್ವಕ್ಕೆ ಜೈಲು ಶಿಕ್ಷೆ

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

SCROLL FOR NEXT