ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

3 ವರ್ಷಗಳಲ್ಲಿ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಗೆ 282 ಕೋಟಿ ರೂಪಾಯಿ ಖರ್ಚು: ಕೇಂದ್ರ ಸರ್ಕಾರ

ಕಳೆದ 3 ವರ್ಷಗಳಲ್ಲಿ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಗಾಗಿ 282 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

3 ವರ್ಷಗಳಲ್ಲಿ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಗೆ 282 ಕೋಟಿ ರೂಪಾಯಿ ಖರ್ಚು: ಕೇಂದ್ರ ಸರ್ಕಾರ
Srinivas Rao BV
Updated On : 27 Jul 2018, 12:03 pm
ನವದೆಹಲಿ: ಕಳೆದ 3 ವರ್ಷಗಳಲ್ಲಿ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಗಾಗಿ 282 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ವಿರೇಂದ್ರ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, 161 ಜಿಲ್ಲೆಗಳ ಪೈಕಿ 104 ರಲ್ಲಿ ಲಿಂಗಾನುಪಾತ ಸುಧಾರಣೆ ಕಂಡಿದೆ ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ.  2015-16 ನೇ ಸಾಲಿನಲ್ಲಿ 59.37 ಕೋಟಿ ಖರ್ಚು ಮಾಡಲಾಗಿತ್ತು. 2016-17 ರಲ್ಲಿ 28.65 ಕೋಟಿ, 2017-18 ರಲ್ಲಿ 169.10 ಕೋಟಿ ರೂಪಾಯಿಗಳನ್ನು ಯೋಜನೆಗಾಗಿ ಖರ್ಚು ಮಾಡಲಾಗಿದೆ. ಇನ್ನು 2018-19 ರಲ್ಲಿ 25.40 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. 

Advertisement

Advertisement


ಈಗ ಹುಟ್ಟುತ್ತಿರುವ ಮಕ್ಕಳ ಪೈಕಿ ಲಿಂಗಾನುಪಾತ ತೀವ್ರಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆ ಜಾರಿಗೆ ತಂದಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement