ದೇಶ

ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ಕಂದಕಕ್ಕೆ ಉರುಳಿಬಿದ್ದ ಬಸ್- 25 ಮೃತದೇಹಗಳು ಪತ್ತೆ

Manjula VN
ರಾಯ್ಗಢ: ಮಹಾರಾಷ್ಟ್ರದ ರಾಯ್ಗಢ ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಮಂದಿ ಮೃತದೇಹಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಮಹಾರಾಷ್ಟ್ರದ ರಾಯ್ಗಢ ಜಿಲ್ಲೆಯಲ್ಲಿ ನಿನ್ನೆಯಷ್ಟೇ ಭೀಕರ ಅಪಘಾತ ಸಂಭವಿಸಿತ್ತು. ಕಂದಕಕ್ಕೆ ಬಸ್ ವೊಂದು ಉರುಳಿ ಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿರುವ ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿತ್ತು.  
ರಾಯ್ಗಢದ ಅಂಬೆನಲಿ ಘಾಟ್ ಬಳಿ ಘಟನೆ ನಡೆದಿತ್ತು. 500 ಅಡಿ ಆಳದ ಕಂದಕಕ್ಕೆ ಬಸ್ ಉರುಳಿ ಬಿದ್ದಿತ್ತು. ಬಸ್ ನಲ್ಲಿ 30 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿತ್ತು. 
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, 25 ಮಂದಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆಂದು ತಿಳಿದುಬಂದಿದೆ. 
ಸ್ಥಳದಲ್ಲಿ ಇನ್ನು ಕೆಲವರ ಮೃತದೇಹಗಳಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಬಸ್ ಅವಶೇಷಗಳಲ್ಲಿ ಕೆಲವರ ಮೃತದೇಹಗಳಿರುವ ಶಂಕೆಗಳಿದ್ದು, ಪರಿಶೀಲನೆ ನಡೆಸಲಾಗುತ್ತದೆ ಎಂದು ಎನ್'ಡಿಆರ್'ಎಫ್ ಡೆಪ್ಯುಟಿ ಕಮಾಂಡೆಂಟ್ ವೈರವನಾಥನ್ ಅವರು ಹೇಳಿದ್ದಾರೆ.
ಚಾಲಕನ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕೇವಲ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾರೆಂದು ರಾಯ್ಗಢ ಸಚಿವ ರವೀಂದ್ರ ಚವನ್ ಅವರು ಹೇಳಿದ್ದಾರೆ. 
SCROLL FOR NEXT