ಮವಾತ್: ಗರ್ಭಿಣಿ ಮೇಕೆ ಮೇಲೆ 9 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಮೇಕೆ ಮೃತಪಟ್ಟಿರುವ ಘಟನೆ ಹರಿಯಾಣದ ಮೇವತ್ ಜಿಲ್ಲೆಯಲ್ಲಿ ನಡೆದಿದೆ.
ಜು.25 ರ ರಾತ್ರಿ ಘಟನೆ ನಡೆದಿದ್ದು, ಮೈವತ್ ನಗೀನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.26 ರಂದು ಅಸ್ಲು ಎಂಬ ವ್ಯಕ್ತಿ ದೂರು ದಾಖಲಿಸಿದ್ದಾರೆ. ಜು.25 ರ ರಾತ್ರಿ ಸವಕಾರ್, ಹರೂನ್, ಜಫ್ಫರ್ ಮತ್ತು ಐವರು ಕಾಮುಕರು ಮೇಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಮೇಕೆ ಸಾವನ್ನಪ್ಪಿದೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಜು.25 ರಂದು ದುಷ್ಕರ್ಮಿಗಳು ಹಳೆಯ ಮನೆಯೊಂದಕ್ಕೆ ಮೇಕೆಯನ್ನು ಕರೆದುಕೊಂಡು ಹೋಗಿದ್ದರು. 8 ಮಂದಿ ಆರೋಪಿಗಳ ಪೈಕಿ ಓರ್ವ ಮಾನಸಿಕ ಅಸ್ವಸ್ಥನಾಗಿದ್ದ. ಘಟನೆ ಬಳಿಕ ದೂರು ದಾಖಲಿಸುವುದಾಗಿ ತಿಳಿಸಿದಾಗ, ಏನೂ ಬೇಕಾದರೂ ಮಾಡಿಕೋ ಎಂದು ಹೇಳಿದ್ದರು. ನಮಗೆ ದೊಡ್ಡ ವ್ಯಕ್ತಿಗಳ ಪರಿಚಯವಿದ್ದು, ಜೈಲಿಗೆ ಹಾಕಿದರೂ ನಮಗೆ ಭಯವಿಲ್ಲ ಎಂದು ಹೇಳಿದ್ದರು ಎಂದು ಅಸ್ಲು ಅವರು ಹೇಳಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೇಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.