ಜಮ್ಮು: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲವು ’ಗೋಲ್ಡನ್ ಟೈಮ್’ ಆಗಿದ್ದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜತೆ ಸೇರಿದ್ದು ತೀವ್ರ "ನೋವಿಗೆ" ಕಾರಣವಾಯಿತು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ 19ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಸಂದರ್ಭ ಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮುಫ್ತಿ ತಾವು ಕಳೆದ ಕೆಲ ವರ್ಷಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿಕೂಟದ ಸರ್ಕಾರವನ್ನು ಮುನ್ನಡೆಸುವಲ್ಲಿ ಪಟ್ಟಿರುವ ಕಷ್ಟಗಳು ಹಾಗೂ ಮುಖ್ಯಮಂತ್ರಿಯಾಗಿ ತಾವು ನಡೆಸಿದ ಹೋರಾಟಗಳ ಕುರಿತು ಅವರು ಮಾತನಾಡಿದ್ದಾರೆ.
ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ರಾಜ್ಯ ಅಭಿವೃದ್ದಿ ಹೊಂದಿದ್ದ ಕಾರಣ ಮೆಹಬೂಬಾ ತಾವು ಕೇಂದ್ರದ ಎನ್ಡಿಎ ಸರ್ಕಾರದ ಬೆಂಬಲವನ್ನು ಪಡೆದುಕೊಳ್ಳಲು ಮೆಹಬೂಬಾ ತಾವು ಬಿಜೆಪಿ ಜತೆ ಕೈಜೋಡೊಸಲು ಮುಂದಾಗಿದ್ದರು. "ಮುಫ್ತಿ ಮಹಮ್ಮದ್ ಸಯೀದ್ 2015ರಲ್ಲಿ ಬಿಜೆಪಿಯೊಂದಿಗೆ ಮತ್ತೆ ಸೇರಲು ಒಪ್ಪಿಗೆ ಸೂಚಿಸಿದ್ದರು. ವಾಜಪೇಯಿ ಆಳ್ವಿಕೆಯಲ್ಲಿ ನಮ್ಮ ರಾಜ್ಯ ಉತ್ತಮ ಅಭಿವೃದ್ದಿ ಕಂಡಿದ್ದದ್ದು ನಮಗೆ ಹಿನ್ನೆಲೆಯಾಗಿತ್ತು. ಆದರೆ ಈ ಬಾರಿ ನಾವು ಸಂಕಷ್ಟದ ದಿನಗಳನ್ನು ಎದುರಿಸಿದ್ದೇವೆ. ಎರಡು ವರ್ಷ ಹಾಗೂ ಎರಡು ತಿಂಗಳ ಕಾಲದ ಮೈತ್ರಿ ಅವಧಿಯಲ್ಲಿ ನಾನು ಗಂಟಲಿನಲ್ಲಿ ವಿಷವನ್ನಿಟ್ಟುಕೊಂಡು ಆಡಳಿತ ನಡೆಸಬೇಕಿಕಿತ್ತು" ಮುಫ್ತಿ ಹೇಳಿದ್ದಾರೆ.
2014 ರ ಅಂತ್ಯದಲ್ಲಿ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದು ಪಿಡಿಪಿ 28 ಸ್ಥಾನ, ಬಿಜೆಪಿ 25 ಸ್ಥಾನ ಜಯಿಸಿದ್ದು ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು 2015 ರಲ್ಲಿ ಸರ್ಕಾರ ರಚನೆ ಮಾಡಿದ್ದವು. 2016 ರ ಜನವರಿಯಲ್ಲಿ ಪಿಡಿಪಿ ಪಕ್ಷದ ನಾಯಕ ಮುಫ್ತಿ ಮಹಮ್ಮದ್ ಸಯೀದ್ ನಿಧನರಾದ ಮೂರು ತಿಂಗಳ ಬಳಿಕ ಏಪ್ರಿಲ್ 4, 2016 ರಂದು ಅವರ ಮಗಳಾದ ಮೆಹಬೂಬಾ ಮುಫ್ತಿ ರಾಜ್ಯದ ಮೊದಲ ಮಹಿಲಾ ಮುಖ್ಯಮಂತ್ರಿಯಾಗಿ ಅಧಿಕಾರ ಪದವಿಗೇರುತ್ತಾರೆ.
"ವಾಜಪೇಯಿ ಅವರ ಅವಧಿ ಮುಫ್ತಿ ಅವರ ಸರ್ಕಾರವಿದ್ದ ನಮ್ಮ ರಾಜ್ಯದ ಪಾಲಿಗೆ ಸುವರ್ಣ ಯುಗವಾಗಿತ್ತು.ಆ ಸಮಯದಲ್ಲಿ ಆ ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗಿತ್ತು.ಉಗ್ರಗಾಮಿ ಚಟುವಟಿಕೆಗಳು ನಿಯಂತ್ರಣದಲ್ಲಿದ್ದವು ಮತ್ತು ಶಾಂತಿ, ಸುವ್ಯವಸ್ಥೆ ಇತ್ತು.ಡಿಯಲ್ಲಿ ಕದನ ವಿರಾಮ ಇತ್ತು ನಾವು ರಸ್ತೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ನಿರ್ಮಿಸಿ, ನಿರ್ವಹಿಸಿದ್ದೆವು." ಮೆಹಬೂಬಾ ಹೇಳಿದ್ದಾರೆ.
ಎರಡು ವರ್ಷಗಳಲ್ಲಿ ನಾನು ಮಾಡಬಹುದಾದ ಎಲ್ಲವನ್ನೂ ಮಾಡಿದ್ದೇನೆ.ನಾನು ಜಮ್ಮು ಮತ್ತು ಕಾಶ್ಮೀರದ ನಡುವೆ ತಾರತಮ್ಯ ಮಾಡಲಿಲ್ಲ ನಾವು ಎರಡೂ ಪ್ರದೇಶಗಳಲ್ಲಿ ಸಮಾನ ಸಂಖ್ಯೆಯ ಕಾಲೇಜುಗಳನ್ನು ತೆರೆಯುತ್ತಿದ್ದೆವು. ಸರ್ಕಾರಿ ಉದ್ಯೋಗಗಳಲ್ಲಿ ಯಾವುದೇ ಭ್ರಷ್ಟಾಚಾರ ಇರಲಿಲ್ಲ" . ಜಮ್ಮು ಪ್ರದೇಶ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಯಲ್ಲಿ ತಾರತಮ್ಯವನ್ನು ಅನುಭವಿಸುತ್ತಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಫ್ತಿ ಈ ಹೇಳಿಕೆ ನಿಡಿದ್ದಾರೆ.
ಕಥುವಾ ಅತ್ಯಾಚಾರ ಪ್ರಕರಣ ಕುರುತು ಪ್ರಸ್ತಾಪಿಸಿದ ಮೆಹಬೂಬಾ "ಅತ್ಯಾಚಾರಿಗಳಿಗೆ ಯಾವುದೇ ಧರ್ಮವಿಲ್ಲ. ಯಾರು ಇದಕ್ಕೆ ಕೋಮು ಬಣ್ಣವನ್ನು ನೀಡಿದ್ದರೋ ಅಂತಹವರಿಗೆ ಡೊಗ್ರ ಸಮುದಾಯದ ಶೌರ್ಯದ ಕುರಿತು ಅರಿವಿಲ್ಲ." ಎಂದರು. ರಾಜ್ಯದ ಅಭಿವೃದ್ದಿ ವಿಚಾರ ಬಂದಾಗ ಈ ಕೋಮು ಭಾವನೆ ಹೊಂದಿದ ವ್ಯಕ್ತಿಗಳು ಏನನ್ನೂ ಮಾಡಿರಲಿಲ್ಲ ಎಂದು ಮುಫ್ತಿ ಹೇಳಿದ್ದಾರೆ.
"ನಾನು ಕಳೆದ ಎರಡು ವರ್ಷಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ತೊಂದರೆ ಎದುರಿಸಿದ್ದೆ. ಆದರೆ ಅದರ ಬಗ್ಗೆ ನಾನು ಎಂದಿಗೂ ಮಾತನಾಡಲಿಲ್ಲ, ಆದರೆ ಇಂದು ನಾನು ಮತ್ತೆ ಮೈತ್ರಿ ಮಾಡಿಕೊಳ್ಳುವುದಿಲ್ಲ" ಅವರು ಹೇಲೀದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics