ಸುಪ್ರೀಂ ಕೋರ್ಟ್ 
ದೇಶ

ಗಂಡನನ್ನು ಮೆಚ್ಚಿಸಲು ಮಹಿಳೆ ಏಕೆ ನೋವು ತಿನ್ನಬೇಕು? ಅವರು ಪಶುಗಳಲ್ಲ: ಸುಪ್ರೀಂ ಕೋರ್ಟ್

ಮಹಿಳೆಯರು ಪಶುಗಳಲ್ಲ, ಅವರು ತನ್ನ ಗಂಡನ ಪಾಲಿಗೆ ಜಾನುವಾರುಗಳಂತೆ ಮಾರಾಟವಾಗುವವರಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನವದೆಹಲಿ: ಮಹಿಳೆಯರು ಪಶುಗಳಲ್ಲ, ಅವರು ತನ್ನ ಗಂಡನ ಪಾಲಿಗೆ ಜಾನುವಾರುಗಳಂತೆ ಮಾರಾಟವಾಗುವವರಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಮಹಿಳೆಯ ಜನನಾಂಗ ಊನದಂತಹಾ ವಿಕೃತ ಪದ್ದತಿ ಆಚರಣೆ ನಿಷೇಧ ಕುರಿತ ಅರ್ಜಿ ವಿಚಾರಣೆ ಆಲಿಸಿದ ನ್ಯಾಯಪೀಠ ಈ ರೀತಿ ಪ್ರತಿಕ್ರಯಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಒಬ್ಬ ಮಹಿಳೆ ಆಕೆಯ ಪತಿಗೆ ಜಾನುವಾರು ಸಿಕ್ಕಂತೆ ಸಿಗುತ್ತಾಳೆಯೆ? ಅಲ್ಲದೆ ಮಹಿಳೆ ಮಾತ್ರವೇ ಏಕೆ ತನ್ನ ಪತಿಯನ್ನು ಮೆಚ್ಚಿಸುವುದಕ್ಕೆ ಇಂತಹಾ ಕಠಿಣ ಆಚರಣೆಗೆ ಒಅಳಗಾಗಬೇಕು? ಅವಳಿಗೆ ಮಾತ್ರವೇ ಏಕೆ ಈ ಬಾದ್ಯತೆ ಅಗತ್ಯವಿದೆ? ಎಂದು ಪ್ರಶ್ನಿಸಿದೆ.
ಈ ಆಚರಣೆಗಳು ಸ್ತ್ರೀ ಲಿಂಗ ಸಂವೇದನೆಗೆ ವಿರುದ್ಧವಾಗಿದ್ದು ಆಕೆಯ ಆರೋಗ್ಯಕ್ಕೆ ಸಹ ಹಾನಿಕಾರಕ ಎಂದು ಅವರು ಅಭಿಪ್ರಾಯಪಟ್ಟರು.
"ಜನನಾಂಗ ಎನ್ನುವುದು ವ್ಯಕ್ತಿಯ ದೇಹದ ಗುರುತಾಗಿದ್ದು ಇದನ್ನು ವಿಕೃತಿಗೊಳಿಸುವುದು ಒಳಿತಲ್ಲ" ನ್ಯಾಯಮೂರ್ತಿಗಳಾದ  ಡಿ ವೈ ಚಂದ್ರಚೂಡ ಹೇಳಿದ್ದಾರೆ. ಏತನ್ಮಧ್ಯೆ ಸ್ತ್ರೀ ಜನನಾಂಗದ ಊನಗೊಳಿಸುವಿಕೆ ಆಚರಣೆ ನಿಷೇಧಕ್ಕೆ ಸರ್ಕಾರ ಬೆಂಬಲಿಸುತ್ತದೆ  ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದರು.
ಎಫ್ಜಿಎಂ ಅಥವಾ 'ಖತ್ನಾ' ಎಂಬುದು ಏಳು ವರ್ಷ ಅಥವಾ ಆರರಿಂದ 12 ರ ವಯಸ್ಸಿನ ಯುವತಿಗೆ ಆಕೆಯ ಜನನಾಂಗದ ಮೇಲಿನ ಚರ್ಮವನ್ನು ತೆಗೆದುಹಾಕುವ ಪ್ರಕ್ರಿಯೆಯಾಗಿದ್ದು, ಇದನ್ನು ಸಾಮಾನ್ಯವಾಗಿ ಬೋಹ್ರಾ ಮುಸ್ಲಿಮರಲ್ಲಿ ಕಾಣಬಹುದಾಗಿದೆ. ಇದಕ್ಕೆ ಸುನತಿ ಎಂದು ಕರೆಯುತ್ತಾರೆ.
ಡಿಸೆಂಬರ್ 2012 ರಲ್ಲಿ ಯುನೈಟೆಡ್ ನೇಷನ್ಸ್ ಈ ಅನಿಷ್ಟ ಆಚರಣೆ ಸಂಬಂಧ ನಿರ್ಣಯವೊಂದನ್ನು ಅಂಗೀಕರಿಸಿದ್ದು ಈ ನಿರ್ಣಯಕ್ಕೆ ಭಾರತ ಸಹ ಸಹಿ ಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT