ದೇಶ

ಸ್ಟೆರ್ಲೈಟ್ ಬಂದ್ ಗೆ ಮಧ್ಯಂತರ ತಡೆ ನೀಡಲು ಎನ್ ಜಿಟಿ ನಕಾರ

Lingaraj Badiger
ನವದೆಹಲಿ: ತಮಿಳುನಾಡಿನ ಟುಟಿಕೊರಿನ್ ನ ಸ್ಟೆರ್ಲೈಟ್ ತಾಮ್ರ ಸಂಸ್ಕರಣ ಘಟಕ ಖಾಯಂ ಬಂದ್ ಆದೇಶಕ್ಕೆ ಮಧ್ಯಂತರ ತಡೆ ನೀಡಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ನಿರಾಕರಿಸಿದೆ.
ತಮಿಳುನಾಡು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ಕೋರಿ ವೇದಾಂತ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎನ್ ಜಿಟಿ ಮುಖ್ಯಸ್ಥ ಎಕೆ ಗೋಯಲ್ ಅವರು, ಈ ಕುರಿತು ಆಗಸ್ಟ್ 9ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿದ್ದಾರೆ.
ವೇದಾಂತ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿಎಂ ಸುಂದರಂ ಅವರು, ಇದೊಂದು ರಾಜಕೀಯ ಪ್ರೇರಿತ ನಿರ್ಧಾರ. ಈಗ ಪ್ರತಿಭಟನೆ ಮತ್ತೊಂದು ರೀತಿಯಲ್ಲಿ ನಡೆಯುತ್ತಿದೆ ಎಂದರು.
ಸ್ಟೆರ್ಲೈಟ್ ಘಟಕದಲ್ಲಿ ಸಲ್ಫರಿಕ್ ಆಸಿಡ್ ಲೀಕ್ ಆಗುತ್ತಿದ್ದು, ಫ್ಯಾಕ್ಟರಿಯ ಆವರಣ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಸುಂದರಂ ಎನ್ ಜಿಟಿಗೆ ಮನವಿ ಮಾಡಿದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ, ಒಂದು ತಿಂಗಳ ಹಿಂದೆಯೇ ಆಸಿಡ್ ಸೋರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲಿದ್ದ ಸಂಪೂರ್ಣ ಆಸಿಡ್ ಅನ್ನು ತೆರವುಗೊಳಿಸಲಾಗಿದೆ ಎಂದರು.
ತೂತ್ತುಕುಡಿ ನಿವಾಸಿಗಳ ಹಿಂಸಾತ್ಮಕ ಪ್ರತಿಭಟನೆಯಲ್ಲಿ 3 ಮಂದಿ ಮೃತಪಟ್ಟ ನಂತರ ತಮಿಳುನಾಡು ಸರ್ಕಾರ ಕಳೆದ ಮೇ ತಿಂಗಳಲ್ಲಿ ಸ್ಟೆರ್ಲೈಟ್ ತಾಮ್ರ ಕಂಪನಿಗೆ ವಿದ್ಯುತ್ ಸ್ಥಗಿತಗೊಳಿಸುವ ಮೂಲಕ ಘಟಕವನ್ನು ಬಂದ್ ಮಾಡಿದೆ.
SCROLL FOR NEXT