ಸಾಂದರ್ಭಿಕ ಚಿತ್ರ 
ದೇಶ

ಪಾರಿದಾಬಾದ್ : ಅಪ್ರಾಪ್ತ ಬಾಲಕಿ ಅತ್ಯಾಚಾರ ಕೊಲೆ, ಶವವನ್ನು ಕಂಟೈನರ್ ಗೆ ಬಿಸಾಕಿದ ಕಿರಾತಕ

ಹರಿಯಾಣದ ಪಾರಿದಾಬಾದ್ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಅಮಾನವೀಯವಾಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಕಂಟೈನರ್ ಒಳಗೆ ಬಿಸಾಕಲಾಗಿದೆ.

ಪಾರಿದಾಬಾದ್: ಹರಿಯಾಣದ ಪಾರಿದಾಬಾದ್  ಜಿಲ್ಲೆಯಲ್ಲಿ  ನಾಲ್ಕು ವರ್ಷದ ಬಾಲಕಿ ಮೇಲೆ  ಅಮಾನವೀಯವಾಗಿ ಅತ್ಯಾಚಾರ ನಡೆಸಿ,  ಕೊಲೆ ಮಾಡಲಾಗಿದೆ.  ಬಳಿಕ ಶವವನ್ನು  ಕಂಟೈನರ್  ಒಳಗೆ ಬಿಸಾಕಲಾಗಿದೆ.

ಬಾಲಕಿಯ ತಂದೆಯ  ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನ್ನೇ ಈ ಕೃತ್ಯ ನಡೆಸಿದ್ದಾನೆ.  ರಾಷ್ಟ್ರ ರಾಜಧಾನಿ ನವದೆಹಲಿಯಿಂದ 80 ಕಿಲೋ ಮೀಟರ್ ದೂರದಲ್ಲಿರುವ ಪಾರಿದಾಬಾದ್ ನ ಅಸಾಹೊಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಾಲಕಿ ಕೊಲೆಗೂ ಮುನ್ನಾ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ.

 24 ವರ್ಷದ ವಿರೇಂದ್ರ  ಬಂಧಿತ  ಆರೋಪಿಯಾಗಿದ್ದಾನೆ.  ರಾತ್ರಿ 1-30ರ ಸುಮಾರಿನಲ್ಲಿ ಸ್ವೀಟ್ ಶಾಪ್ ನಿಂದ ಈತ ಹೊರಗೆ ಬಂದಿದ್ದಾನೆ. ಮನೆಗೆ ಆ ಬಾಲಕಿಯನ್ನು ಡ್ರಾಪ್ ಮಾಡಿದ್ದಾನೆ.  ಆದರೆ, ನಿನ್ನೆ ರಾತ್ರಿಯವರೆಗೂ ಅವರಿಬ್ಬರೂ ಸಿಕ್ಕಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರು ಈತನ ಮನೆಗೆ ಹೋದ್ದಾಗ ಆತ ಕಂಡುಬಂದಿದ್ದಾನೆ.  ಬಾಲಕಿ ದೇಹವು ತನ್ನ ಮನೆಯಲ್ಲಿ ಒಂದು ದೊಡ್ಡ ಕಂಟೇನರ್ ಒಳಗೆ ಬಿಸಾಡಿದೆ ಎಂದು  ಪೊಲೀಸರಿಗೆ  ತಿಳಿಸಿದ್ದಾನೆ.

ಪೋಕ್ಸೋ ಕಾಯ್ದೆಯಡಿ  ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ.  ಆತನಿಗೆ ಮದುವೆಯಾಗಿದೆ. ಆದರೆ, ಎರಡು ವರ್ಷಗಳಿಂದ ಹೆಂಡತಿ ಆತನ ಜೊತೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT