ಅಮೆರಿಕದ ಆಕ್ಷೇಪಣೆ ಹೊರತಾಗಿಯೂ ಭಾರತ-ರಷ್ಯಾ ರಕ್ಷಣಾ ಒಪ್ಪಂದ ಅಂತಿಮ ಹಂತಕ್ಕೆ 
ದೇಶ

ಅಮೆರಿಕದ ಆಕ್ಷೇಪಣೆ ಹೊರತಾಗಿಯೂ ಭಾರತ-ರಷ್ಯಾ ರಕ್ಷಣಾ ಒಪ್ಪಂದ ಅಂತಿಮ ಹಂತಕ್ಕೆ

ಅಮೆರಿಕದೊಂದಿಗಿನ ಭಾರತದ ರಕ್ಷಣಾ ಸಹಕಾರ ಸೀಮಿತಗೊಳ್ಳುವ ಸಾಧ್ಯತೆಯ ಹೊರತಾಗಿಯೂ ಭಾರತ-ರಷ್ಯಾ ನಡುವಿನ 5.5 ಬಿಲಿಯನ್ ಡಾಲರ್ ಮೊತ್ತದ ಡೀಲ್ ಅಂತಿಮ ಹಂತಕ್ಕೆ ತಲುಪಿದೆ.

ಅಮೆರಿಕದೊಂದಿಗಿನ ಭಾರತದ ರಕ್ಷಣಾ ಸಹಕಾರ ಸೀಮಿತಗೊಳ್ಳುವ ಸಾಧ್ಯತೆಯ ಹೊರತಾಗಿಯೂ ಭಾರತ-ರಷ್ಯಾ ನಡುವಿನ 5.5 ಬಿಲಿಯನ್ ಡಾಲರ್ ಮೊತ್ತದ ಡೀಲ್ ಅಂತಿಮ ಹಂತಕ್ಕೆ ತಲುಪಿದೆ. 
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಷ್ಯಾದೊಂದಿಗಿನ ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಸುವ ಮಹತ್ವದ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಒಪ್ಪಂದದಿಂದಾಗಿ ಭಾರತ-ಅಮೆರಿಕ ನಡುವಿನ ರಕ್ಷಣಾ ಸಹಕಾರಕ್ಕೂ 
ಯಾವುದೇ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 
ಭಾರತ-ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಬಾಹ್ಯ ಒತ್ತಡಗಳಿಂದ ಮುಕ್ತವಾದದ್ದು ಹಾಗೂ ಪ್ರತ್ಯೇಕವಾದದ್ದು ಎಂದು ಅಮೆರಿಕಾಗೆ ಭಾರತ ಪ್ರತಿ ಹಂತದಲ್ಲೂ ಮನವರಿಕೆ ಮಾಡಿಕೊಟ್ಟಿದೆ, ರಷ್ಯಾ-ಭಾರತದ ರಕ್ಷಣಾ ಸಂಬಂಧ ಸಂದಿಗ್ಧ ಪರಿಸ್ಥಿತಿಗಳಲ್ಲಿಯೂ ಯಶಸ್ವಿಯಾಗಿ ಮುನ್ನಡೆದುಕೊಂಡುಬಂದಿರುವುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 
ರಷ್ಯಾದೊಂದಿಗೆ ಯಾವುದೇ ರೀತಿಯ ರಕ್ಷಣಾ ಹಾಗೂ ಗುಪ್ತಚರ ಸಂಸ್ಥೆಗಳೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳು ಅಥವಾ ದೇಶಗಳ ವಿರುದ್ಧ ಕ್ರಮ ಜರುಗಿಸುವುದರ ಬಗ್ಗೆ ಅಮೆರಿಕ ಕಠಿಣ ನಿಲುವು ಅನುಸರಿಸುತ್ತಿದೆ  ಈ ಹಿನ್ನೆಲೆಯಲ್ಲಿ ರಷ್ಯಾದೊಂದಿಗಿನ ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್  ಒಪ್ಪಂದ ಅಮೆರಿಕ-ಭಾರತ ರಕ್ಷಣಾ ಸಹಕಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ