ಸಂಗ್ರಹ ಚಿತ್ರ 
ದೇಶ

ಅಮಿತ್ ಶಾ-ಠಾಕ್ರೆ ಭೇಟಿ ಹೊರತಾಗಿಯೂ ಶಿವಸೇನೆ ಏಕಾಂಗಿ ಸ್ಪರ್ಧೆ: ಸಂಜಯ್ ರಾವತ್

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಉದ್ಧವ್ ಠಾಕ್ರೆ ಭೇಟಿ ಹೊರತಾಗಿಯೂ ತಮ್ಮ ನಿರ್ಧಾರ ಅಚಲವಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಎನ್ ಡಿಎ ಮೈತ್ರಿಕೂಟ ಸೇರುವುದಿಲ್ಲ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಮುಂಬೈ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಉದ್ಧವ್ ಠಾಕ್ರೆ ಭೇಟಿ ಹೊರತಾಗಿಯೂ ತಮ್ಮ ನಿರ್ಧಾರ ಅಚಲವಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಎನ್ ಡಿಎ ಮೈತ್ರಿಕೂಟ ಸೇರುವುದಿಲ್ಲ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಗುರುವಾರ ಮುಂಬೈನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಉದ್ಧವ್ ಠಾಕ್ರೆ ಭೇಟಿಯ ಅಜೆಂಡಾ ಏನು ಎಂಬುದು ನಮಗೆ ಗೊತ್ತಿದೆ. ನಾವು ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ನಾವು ಎನ್ ಡಿಎ ಮೈತ್ರಿಕೂಟ ಸೇರದೇ ಏಕಾಂಗಿ ಸ್ಪರ್ಧೆ ಮಾಡುತ್ತೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಈ  ಹಿಂದೆ ಇದೇ ಸಂಜಯ್ ರಾವತ್ ಅವರು ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಅಂಕಣ ಬರೆದು, ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೋಡಿಗಿಂತ ಕಾಂಗ್ರೆಸ್ ಮತ್ತು ದೇವೇಗೌಡ ಅವರ ಜುಗಲ್ ಬಂದಿ ಉತ್ತಮವಾಗಿದೆ. ನರೇಂದ್ರ ಮೋದಿ, ಅಮಿತ್ ಶಾ ಜೋಡಿಗಿಂತ ಜ್ಯಾತ್ಯಾತೀತರಾದ ದೇವೇಗೌಡರು ಉತ್ತಮ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI ಬಳಕೆಯಲ್ಲಿ ಮುಂಚೂಣಿಯಲ್ಲಿ ಭಾರತ: ಜಗತ್ತಿಗೆ ಪರಿಹಾರ ರೂಪಿಸುತ್ತೇವೆ- ಪ್ರಧಾನಿ ಮೋದಿ

ನವದೆಹಲಿ: 'ಇಂಡಿಯಾ AI ಇಂಪ್ಯಾಕ್ಟ್ ಎಕ್ಸ್‌ಪೋ' ಗೆ ಪ್ರಧಾನಿ ಮೋದಿ ಚಾಲನೆ

T20 World Cup 2026: ಭಾರತ- ಪಾಕ್ ಹ್ಯಾಂಡ್ ಶೇಕ್ ವಿವಾದದ ನಡುವೆ ರೋಹಿತ್- ವಾಸೀಂ ಅಕ್ರಂ ಅಪ್ಪುಗೆ! Video

ಇಶಾ ಫೌಂಡೇಷನ್​​ನಲ್ಲಿ ಮಹಾ ಶಿವರಾತ್ರಿ: ರಾತ್ರಿಯಿಡೀ ಕುಣಿದು ಕುಪ್ಪಳಿಸಿದ ತಮನ್ನಾ ಭಾಟಿಯಾ, ಸಾರಾ ಅರ್ಜುನ್, ಶ್ರೀನಿಧಿ ಶೆಟ್ಟಿ! Video

ಜಮ್ಕೊ: ಬೆಂಗಳೂರಿನಲ್ಲಿ ಉತ್ಪನ್ನ ಎಂಜಿನಿಯರಿಂಗ್‌ ಕೇಂದ್ರ

SCROLL FOR NEXT