ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 21 ರಿಂದ 22 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 15 ರಿಂದ 16 ಪೈಸೆ ಕಡಿಮೆಯಾಗಿದೆ.
ಹಿಂದಿನ ದಿನಗಳಿಗೆ ಹೋಲಿಸಿದ್ದರೆ ದೆಹಲಿ, ಕೊಲ್ಕತ್ತಾ, ಮುಂಬೈ. ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿರುವುದು ಕಂಡುಬಂದಿದೆ.
ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 77. 42 ಪೈಸೆ. ಡೀಸೆಲ್, 68. 58 ಪೈಸೆ ಆಗಿದೆ. ನಿನ್ನೆ ದಿನ ಲೀಟರ್ ಪೆಟ್ರೋಲ್ ಬೆಲೆ ಲೀಟರ್ ಗೆ 77. 63 ಹಾಗೂ ಡೀಸೆಲ್ ದರ 68. 73 ಪೈಸೆಯಷ್ಟಾಗಿತ್ತು.
ದೆಹಲಿಯನ್ನು ಹೊರತುಪಡಿಸಿದರೆ ಇನ್ನಿತರ ನಗರಗಳಲ್ಲಿಯೂ ಪೆಟ್ರೋಲ್ ದರದಲ್ಲಿ ಪರಿಷ್ಕರಣೆಯಾಗಿದ್ದು, ಕೊಲ್ಕತ್ತಾದಲ್ಲಿ 80. 07, ಮುಂಬೈಯಲ್ಲಿ 85.24 ಹಾಗೂ ಚೆನ್ನೈನಲ್ಲಿ 80.37 ಪೈಸೆ ಆಗಿದೆ.
ಇನ್ನಿತರ ಮೆಟ್ರೋ ನಗರಗಳಲ್ಲಿ ಡೀಸೆಲ್ ದರದಲ್ಲಿ ಪರಿಷ್ಕರಣೆಯಾಗಿದ್ದು, ಕೊಲ್ಕತ್ತಾದಲ್ಲಿ 71.13 , ಮುಂಬೈಯಲ್ಲಿ 73. 02 ಹಾಗೂ ಚೆನ್ನೈನಲ್ಲಿ 72. 40 ಪೈಸೆ ಆಗಿದೆ.