ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಪೊಲೀಸರು ಭೀಕರ ಎನ್ ಕೌಂಟರ್ ಮಾಡಿದ್ದು, ಘಟನೆಯಲ್ಲಿ ಶಂಕಿತ 4 ಮಂದಿ ಭೂಗತ ಪಾತಕಿಗಳು ಹತರಾಗಿದ್ದಾರೆ.
ದಕ್ಷಿಣ ದೆಹಲಿಯ ಚತಾರ್ ಪುರ ಪ್ರದೇಶದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿ ಈ ಎನ್ ಕೌಂಟರ್ ಮಾಡಿದ್ದು, ಈ ವೇಳೆ ನಾಲ್ಕು ಮಂದಿ ಶಂಕಿತ ಭೂಗತ ಪಾತಕಿಗಳು ಹತರಾಗಿದ್ದಾರೆ. ಅಂತೆಯೇ ಮೂವರು ಪೊಲೀಸರಿಗೂ ಘಟನೆಯಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತರಾದ ಶಂಕಿತರು ಭೂಗತ ಪಾತಕಿ ರಾಜೇಶ್ ಭಾರ್ತಿ ಗ್ಯಾಂಗ್ ನವರು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಂತೆಯೇ ಪ್ರಸ್ತುತ ಹತರಾದ ಶಂಕಿತ ಪಾತಗಳ ಮೇಲೆ ಪೊಲೀಸ್ ಇಲಾಖೆ ನಗದು ಬಹುಮಾನ ಘೋಷಣೆ ಮಾಡಿತ್ತು. ಇನ್ನು ಭೂಗತ ಪಾತಕಿ ರಾಜೇಶ್ ಭಾರ್ತಿ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.