ನಮಗೆ ಧರಣಿಯ ಹೊರತಾಗಿ ಬೇರೆ ಆಯ್ಕೆಗಳಿಲ್ಲ: ಎಲ್-ಜಿ ಕಛೇರಿಯಿಂದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿಡಿಯೋ ಸಂದೇಶ 
ದೇಶ

ನಮಗೆ ಧರಣಿಯ ಹೊರತಾಗಿ ಬೇರೆ ಆಯ್ಕೆಗಳಿಲ್ಲ: ಎಲ್'ಜಿ ಕಛೇರಿಯಿಂದ ಕೇಜ್ರಿವಾಲ್ ವಿಡಿಯೋ ಸಂದೇಶ

ಐಎಎಸ್ ಅಧಿಕಾರಿಗಳಿಗೆ ಅವರ "ಮುಷ್ಕರ" ಕೈಬಿಡುವಂತೆ ನಿರ್ದೇಶನ ನೀಡುವುದು ಸೇರಿದಂತೆ ನಮ್ಮ ಬೇಡಿಕೆಗಳತ್ತ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಯಾವ ಕಿಮ್ಮತ್ತೂ ನೀಡುತ್ತಿಲ್ಲ

ನವದೆಹಲಿ: ಐಎಎಸ್ ಅಧಿಕಾರಿಗಳಿಗೆ ಅವರ "ಮುಷ್ಕರ" ಕೈಬಿಡುವಂತೆ ನಿರ್ದೇಶನ ನೀಡುವುದು ಸೇರಿದಂತೆ ನಮ್ಮ ಬೇಡಿಕೆಗಳತ್ತ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಯಾವ ಕಿಮ್ಮತ್ತೂ ನೀಡುತ್ತಿಲ್ಲ. ನಮಗೆ ಬೇರೆ ಆಯ್ಕೆಗಳೇ ಇಲ್ಲ, ನಾನು ಮತ್ತು ನನ್ನ ಸಂಪುಟದ ಸಚಿವರು ಗವರ್ನರ್ ಕಛೇರಿಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗವರ್ನರ್ ಅವರ ಕಛೇರಿಯಿಂದ ವೀಡಿಯೋ ಸಂದೇಶವನ್ನು ಬಿಡುಗಡೆಗೊಳಿಸಿದ ಕೇಜ್ರಿವಾಲ್, ಅವರು ಮತ್ತು ಅವರ ಮಂತ್ರಿಗಳು 'ಧರ್ಮ’ದ ಪರ ಹೋರಾಟದಲ್ಲಿ ತೊಡಗಿದ್ದೇವೆ.ಇದರಿಂದ ದೆಹಲಿ ಜನರಿಗೆ ಸೌಲಭ್ಯಗಳು ಸಿಗಲಿದೆ, ಜತೆಗೆ ಸರ್ಕಾರ ಸಹ ತನ್ನ ಕೆಲಸ ಮುಂದುವರಿಸಬಹುದಾಗಿದೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ತೊಡಗಿರುವ ಐಎಎಸ್ ಅಧಿಕಾರಿಗಳಿಗೆ ಅವರ "ಮುಷ್ಕರ" ಕೈಬಿಡುವಂತೆ ನಿರ್ದೇಶನ ನಿಡಬೇಕು, ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಲು ಅನುಮತಿ ನೀಡಬೇಕು ಎನ್ನುವ ಬೇಡಿಕೆ ಸೇರಿ ಅನೇಕ ಬೇಡಿಕೆಗಲನ್ನು ಮುಂದಿಟ್ಟು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ ಸಚಿವರುಗಳು ಲೆಫ್ಟಿನೆಂಟ್ ಗವರ್ನರ್ ಕಛೇರಿಯಲ್ಲಿ ಸೋಮವಾರ ಸಂಜೆಯಿಂದ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಅಧಿಕಾರಿಗಳು ಮಂತ್ರಿಗಳೊಂದಿಗೆ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ  ಅವರ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ದೆಹಲಿಯ ಎಎಪಿ  ಸರ್ಕಾರ ಆರೋಪಿಸಿದೆ. ಫೆಬ್ರವರಿ 19-20 ರ ಮಧ್ಯರಾತ್ರಿಯಂದು ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಅಂದಿನಿಂದಲೂ ಅಧಿಕಾರಿಗಳು  "ಭಾಗಶಃ ಮುಷ್ಕರ" ನಡೆಸಿದ್ದಾರೆ ಎಂದು ಸರ್ಕಾರ ಆರೋಪ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ, ಅಮೆರಿಕದ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

Pepsi To McDonald: ಸುಂಕ ಸಂಘರ್ಷದ ನಡುವೆ ಅಮೆರಿಕದ ದೈತ್ಯ ಕಂಪನಿಗಳಿಗೆ ಭಾರತದಲ್ಲಿ #Boycott ಬಿಸಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

US President: ಅನಾರೋಗ್ಯದ ವದಂತಿ, ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸದ ಡೊನಾಲ್ಡ್ ಟ್ರಂಪ್!

SCROLL FOR NEXT