ಸಾಂದರ್ಭಿಕ ಚಿತ್ರ 
ದೇಶ

ಜಾರ್ಖಂಡ್‌: ಜಾನುವಾರು ಕಳ್ಳತನ ಶಂಕೆ, ಗೋ ರಕ್ಷಕರಿಂದ ಇಬ್ಬರ ಹತ್ಯೆ

ಜಾನುವಾರು ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗೋರಕ್ಷಕರು ಇಬ್ಬರನ್ನು ಚಚ್ಚಿ ಸಾಯಿಸಿರುವ ಘಟನೆ ಜಾರ್ಖಂಡ್...

ಜಾರ್ಖಂಡ್‌: ಜಾನುವಾರು ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗೋರಕ್ಷಕರು ಇಬ್ಬರನ್ನು ಚಚ್ಚಿ ಸಾಯಿಸಿರುವ ಘಟನೆ ಜಾರ್ಖಂಡ್ ನ‌ ಸಂತಾಲ್‌ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಡಿಯೋದಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತೆ ಕಿರಣ್ ಕುಮಾರಿ ಪಸಿ ಅವರು ತಿಳಿಸಿದ್ದಾರೆ.
ಹತ್ಯೆಗೀಡಾಗಿದವರನ್ನು ಮುರ್ತಜಾ ಅನ್ಸಾರಿ ಮತ್ತು ಚಾರ್ಕು ಅನ್ಸಾರಿ ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಇನ್ನೂ ಮೂವರು ಹೇಗೋ ತಪ್ಪಿಸಿಕೊಂಡು ಪಾರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿಲಾಗಿದ್ದು, ಗ್ರಾಮದಲ್ಲಿ ಘಟನೆ ನಡೆದ ಸಂತಾಲ್‌ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದೇವೆ ಎಂದು ಪಸಿ ಹೇಳಿದ್ದಾರೆ.
ಜಾರ್ಖಂಡ್ ನ‌ಲ್ಲಿ ಮೊತ್ತ ಮೊದಲ ಬಾರಿಗೆ ಗೋರಕ್ಷಕರಿಗೆ ಶಿಕ್ಷೆ ವಿಧಿಸಲ್ಪಟ್ಟ  ಆಲಿಮುದ್ದೀನ್‌ ಅನ್ಸಾರಿ ಕೇಸನ್ನು ರಾಂಚಿಯ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಇತ್ಯರ್ಥಪಡಿಸಿದ ಮೂರು ತಿಂಗಳ ತರುವಾಯ ಗೋರಕ್ಷಕರಿಂದ ನಡೆದಿರುವ ಇನ್ನೊಂದು ಕೊಲೆ ಕೃತ್ಯ ಇದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ಚುನಾವಣೆ: DMK ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ 2,000 ರೂ ಸೇರಿ ಭರಪೂರ ಉಚಿತ ಗ್ಯಾರಂಟಿಗಳ ಘೋಷಣೆ!

ಇದು ಹೊಸ ಕೋಳಿ: ಕಾಮೆಂಟರಿ ವೇಳೆ ಅಶ್ವಿನ್ ಕಾಲೆಳೆದ ವೀರೇಂದ್ರ ಸೆಹ್ವಾಗ್, Video

IPL 2026: ರೋಹಿತ್, ರಿಕಲ್ಟನ್ ಅಬ್ಬರದ ಬ್ಯಾಟಿಂಗ್; KKR ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

ಜಾರ್ಖಂಡ್‌: ರಾಮನವಮಿ ಮೆರವಣಿಗೆ ವೇಳೆ ಹರಿದ ನೆತ್ತರು; ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ

ಸೌದಿ ವಾಯುನೆಲೆ ಮೇಲೆ ಕ್ಷಿಪಣಿ, ಡ್ರೋನ್ ದಾಳಿ: ಅಮೆರಿಕದ AWACS ವಿಮಾನ ಹೊಡೆದುರುಳಿಸಿದ್ದೇವೆ ಎಂದ ಇರಾನ್!

SCROLL FOR NEXT