ದೇಶ

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್ ಡಿ ಕಡ್ಡಾಯ: ಪ್ರಕಾಶ್ ಜಾವಡೆಕರ್

Lingaraj Badiger
ನವದೆಹಲಿ: 2021ರಿಂದ ವಿಶ್ವವಿದ್ಯಾಲಯ ಅಥವಾ ಕಾಲೇಜ್ ಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಲು ಪಿಎಚ್ ಡಿ ಕಡ್ಡಾಯ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಅವರು ಬುಧವಾರ ಹೇಳಿದ್ದಾರೆ.
ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ ವಿಶ್ವವಿದ್ಯಾಲಯ ಅಥವಾ ಪದವಿ ಕಾಲೇಜ್ ಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಲು ಸ್ನಾತಕೋತ್ತರ ಪದವಿ ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್ ಇಟಿ) ಕಡ್ಡಾಯವಾಗಿದೆ. 
ಕೇಂದ್ರ ಸರ್ಕಾರ ಕಾಲೇಜು ಮಟ್ಟದಲ್ಲಿ ಶಿಕ್ಷಕರ ಕಾರ್ಯಕ್ಷಮತೆಯನ್ನು ಅಳೆಯಲು ಬಳಸುತ್ತಿದ್ದ ಶೈಕ್ಷಣಿಕ ಕಾರ್ಯಕ್ಷಮತೆಯ ಸೂಚ್ಯಂಕವನ್ನು ದೂರ ಮಾಡಿದ್ದು, ಅಕಾಡೆಮಿಕ್ ಪರ್ಫಾರ್ಮೆನ್ಸ್ ಇಂಡೆಕ್ಸ್ ಟೂಲ್ ಬದಲಾಗಿ, ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಹೊಸ, ಸರಳೀಕೃತ "ಶಿಕ್ಷಕರ ಮೌಲ್ಯಮಾಪನ ಶ್ರೇಣಿಯನ್ನು ಪರಿಚಯಿಸಿದೆ ಎಂದು ಜಾವಡೆಕರ್ ತಿಳಿಸಿದ್ದಾರೆ.
ಇನ್ನು ಶೈಕ್ಷಣಿಕ ನಿಯತಕಾಲಿಕಗಳಲ್ಲಿನ ಸಂಶೋಧನಾ ಕಾರ್ಯದ ಪ್ರಕಟಣೆ ಬಡ್ತಿಗೆ  ಮಾನದಂಡವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಯುಜಿಸಿ ದೇಶದ ಸುಮಾರು 800 ವಿಶ್ವವಿದ್ಯಾಲಯಗಳು ಹಾಗೂ 40 ಸಾವಿರ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಏಕರೂಪದ ನಿಯಮಾವಳಿಗಳನ್ನು ರೂಪಿಸಿದ್ದು, ಕೇಂದ್ರ ಸರ್ಕಾರದ ಇದಕ್ಕೂ ಅಂಗೀಕಾರ ನೀಡುವ ನಿರೀಕ್ಷೆಯಿದೆ.
SCROLL FOR NEXT