ಮಕ್ಕಳ ಕಳ್ಳರೆಂದು ಭಾವಿಸಿ ಯುವಕರ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ 
ದೇಶ

ಮಕ್ಕಳ ಕಳ್ಳರೆಂದು ಭಾವಿಸಿ ಯುವಕರ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ

ಅಸೋಮ್ ನ ಕರ್ಬಿ ಅಂಗ್ಲೋಂಗ್ ಜಿಲ್ಲೆಯಲ್ಲಿ ಕಳೆದ ವಾರ ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಯುವಕರನ್ನು ಹತ್ಯೆ ಮಾಡಿದ್ದ ಘಟನೆ ಸಂಬಂಧ......

ಗೌಹಾಟಿ(ಅಸೋಮ್): ಅಸೋಮ್ ನ ಕರ್ಬಿ ಅಂಗ್ಲೋಂಗ್ ಜಿಲ್ಲೆಯಲ್ಲಿ ಕಳೆದ ವಾರ ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಯುವಕರನ್ನು ಹತ್ಯೆ ಮಾಡಿದ್ದ ಘಟನೆ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೋಲೀಸರು ತಿಳಿಸಿದರು.
ಇದರೊಡನೆ ಘಟನೆ ಸಂಬಂಧ ಬಂಧಿತರಾದವರ ಸಂಖೆ 64ಕ್ಕೆ ತಲುಪಿರುವುದಾಗಿ ಅವರು ಮಾಹಿತಿ ನೀಡಿದರು.
ಕರ್ಬಿ ಅಂಗ್ಲೋಂಗ್ ಪೋಲೀಸರು ಇಬ್ಬರು ಯುವಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜೋಝ್ ತಿಮಂಗ್ ಅಲಿಯಾಸ್ ’ಅಲ್ಫಾ’ ನನ್ನು ಬಂಧಿಸಿದ್ದಾರೆ. ಬಲೂರ್ ಘಾಟ್ ಪ್ರದೇಶದಲ್ಲಿ ಈತನ ಬಂಧನವಾಗಿದೆ ಎಂದು  ಪೊಲೀಸ್ ಅಧೀಕ್ಷಕ ಎಸ್ ಪಿ ಗಂಜಲಾ ಹೇಳಿದ್ದಾರೆ.
ತಿಮಂಗ್ ಜನರಲ್ಲಿ ಇಲ್ಲಸಲ್ಲದ ಊಹಾಪೋಹವನ್ನು ಹುಟ್ಟು ಹಾಕಿದ್ದಲ್ಲದೆ ತಮ್ಮ ವಾಹನದಲ್ಲಿ  ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಮಕ್ಕಳ ಕಳ್ಳರೆಂದು ಬಿಂಬಿಸಿದ್ದನು. ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ ಮಕ್ಕಳ ಕಳ್ಳರ ಬಗ್ಗೆ ವದಂತಿಗಳನ್ನು ಹರಡಿಸಲು ಕಾರಣವಾಗಿದ್ದನೆಂದು ಎಸ್ ಪಿ ಗಂಜಲಾ ವಿವರಿಸಿದರು.
ಆರೋಪಿಯ ಬಂಧನಕ್ಕಾಗಿ ಫೊಳಿಸರು ಭಾರೀ ಕಾರ್ಯಾಚರಣೆ ನಡೆಸಿದ್ದರು. ಆದರೆ ಅಂತಿಮವಾಗಿ ಬುಧವಾರ ಬೆಳಿಗ್ಗೆ ಆರೋಪಿ ಬಂಧನವಾಗಿದೆ ಎಂದು ಅವರು ಹೇಳಿದ್ದಾರೆ.
ತಿಮಂಗ್ ಕಾಂಗ್ಥಿಲ್ಯಾಂಗ್ಸ್ಸೊಗ್ರಾಮದ ನಿವಾಸಿಯಾಗಿದ್ದು ಶುಕ್ರವಾರ ಮಧ್ಯಾಹ್ನ ಮೃತ ಯುವಕರು ಅದೇ ಹಳ್ಳಿಗೆ ತೆರಳಿದ್ದರು.
ಇಬ್ಬರು ಸ್ನೇಹಿತರು - ನಿಲೋತ್ಪಲ್ ದಾಸ್ (29) ಮತ್ತು ಅಭಿಜೀತ್ ನಾಥ್ (30) - ಕಾರ್ಬಿ ಆಂಗ್ಲೋಂಗ್ ಜಿಲ್ಲೆಯ ಪಂಜುರಿಯಲ್ಲಿ ಜನ ಸಮೂಹದಿಂದ ಹತ್ಯೆಗೀಡಾಗಿದ್ದರು. ಇಬ್ಬರೂ ಯುವಕರನ್ನು ಮಕ್ಕಳ ಅಪಹರಣಕಾರರೆಂದು ಭಾವಿಸಿದ್ದ ಜನರ ಗುಂಪು ಅವರಿಗೆ ಮನಬಂದ್ಂತೆ ಥಳಿಸಿ ಹತ್ಯೆ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ