ದೇಶ

ದೆಹಲಿ ವಾಯು ಗುಣಮಟ್ಟ ಶೀಘ್ರವೇ ಸುಧಾರಿಸಲಿದೆ: ಹರ್ಷವರ್ಧನ್

Shilpa D
ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ  ವಾಯುವಿನ ಗುಣಮಟ್ಟ ಶೀಘ್ರವೇ ಸುಧಾರಿಸಲಿದೆ ಎಂದು  ಕೇಂದ್ರ ಪರಿಸರ ಸಚಿವ ಹರ್ಷವರ್ದನ್ ತಿಳಿಸಿದ್ದಾರೆ.ರಾಷ್ಟ್ರ ರಾಜಧಾನಿ  ದೆಹಲಿಯಲ್ಲಿ ಹೆಚ್ಚಿನ ವಾಯು ಮಾಲಿನ್ಯವಾಗಲೂ  ದೂಳು ಸಹಿತ ಬಿರುಗಾಳಿ ಕಾರಣ ಎಂದು ಆರೋಪಿಸಿದ್ದಾರೆ. 
ಧೂಳು ಸಹಿತ ಬಿರುಗಾಳಿಯಿಂದ ವಾಯುವಿನ ಗುಣಮಟ್ಟ ಹಾಳಾಗುತ್ತಿದೆ, ಈ ಸಂಬಂಧ ಪರಿಸರ ಇಲಾಖೆ ಮತ್ತು ಕಾರ್ಯಪಡೆ ಜೊತೆ ಸಭೆ ನಡೆಸಲಾಗಿದೆ. ಈ ಸಮಸ್ಯೆಗೊಳಗಾಗಿರುವ ರಾಜ್ಯ ಸರ್ಕಾರಗಳಿಗೆ ನಾವು ಹಲವು ಸಲಹೆ ನೀಡಿದ್ದೇವೆ, ಈ ವಾರಾಂತ್ಯದೊಳಗೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ,. ಮುಂದಿನ ಒಂದು ಎರಡು ದಿನಗಳಲ್ಲಿ  ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದ್ದಾರೆ.
ನಾಗರಿಕರು ಹೆಚ್ಚಿನ ಸಮಯ ಹೊರಗೆ ಕಳೆಯುವುದರ ಬದಲು ಮನೆಯ ಒಳಗೆ ಇರುವಂತೆ ಸೂಚಿಸಿದ್ದಾರೆ,  ರಾಜಧಾನಿ ದೆಹಲಿಯಲ್ಲಿ  ವಾಯುವಿನ ಗುಣಮಟ್ಟ ಅಪಾಯಕಾರಿ ಮಟ್ಟ ತಲುಪಿದೆ. ರಾಜಸ್ತಾನದಿಂದ ಬೀಸುತ್ತಿರುವ ಪ್ರಬಲ ಚಂಡಮಾರುತ ವಿರೋಧಿ ಗಾಳಿಯಿಂದಾಗಿ ದೆಹಲಿ ಗಾಳಿಯ ಗುಣಮಟ್ಟಕ್ಕೆ ಹಾಳಾಗಲು ಕಾರಣವಾಗಿದೆ ಎಂದು ಹೇಳಿದ್ದಾರೆ. 
SCROLL FOR NEXT