ದೇಶ

ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ವರದಿಯತ್ತ ಕೇಂದ್ರ ಸರ್ಕಾರ ಗಮನ ಹರಿಸಲಿ- ಶಶಿ ತರೂರ್

Nagaraja AB

ತಿರುವನಂತಪುರ: ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವೇಳೆ  ಸರ್ಕಾರಕ್ಕೆ ಅಪೂರ್ಣ ಮಾಹಿತಿ ಇದ್ದರೆ  ವಿಶ್ವಸಂಸ್ಥೆಯ ವರದಿ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್  ಸಲಹೆ ನೀಡಿದ್ದಾರೆ.

49 ಪುಟಗಳ ವರದಿಯಲ್ಲಿ ಕಾಶ್ಮೀರದಲ್ಲಿನ ಭಾರತ ಹಾಗೂ ಪಾಕಿಸ್ತಾನ ಸೇನೆಗಳಿಂದ ಮಾನವ  ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಲಾಗಿದ್ದು, ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗಗಳ ಕಾರ್ಯಾಲಯದಿಂದ  ತನಿಖೆ ನಡೆಸುವುದಾಗಿ ಹೇಳಿದೆ.
ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಆಯೋಗ ತನ್ನ  ಕೆಲಸವನ್ನು ಮಾಡುತ್ತಿದೆ. ನಾವು ನಮ್ಮ ಕೆಲಸವನ್ನೂ ಮಾಡುತ್ತಿದ್ದೇವೆ. ಕಾಶ್ಮೀರದಲ್ಲಿ ಸಾಮಾನ್ಯ ಪರಿಸ್ಥಿತಿ ಇದೆ ಎಂಬುದು ತಪ್ಪಾಗುತ್ತದೆ.  ವರದಿ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಗಮನಹರಿಸಲಿ, ಒಂದು ವೇಳೆ ತಪ್ಪಾಗಿದ್ದರೆ ವಿಮರ್ಶೆ ಮಾಡಿಕೊಳ್ಳಲಿ ಜನರ ಹಿತಾಸಕ್ತಿ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶಶಿ ತರೂರ್ ಒತ್ತಾಯಿಸಿದ್ದಾರೆ.
SCROLL FOR NEXT