ಆರ್ ಎಸ್ಎಸ್, ಬಿಜೆಪಿ ನಾಯಕರಿಗೆ ಔತಣಕೂಟ ಆಯೋಜಿಸಲಿರುವ ಪ್ರಧಾನಿ ಮೋದಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಂಘಪರಿವಾರ, ಬಿಜೆಪಿಯ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಔತಣ ಕೂಟ ಆಯೋಜಿಸಿದ್ದಾರೆಂದು ತಿಳಿದುಬಂದಿದೆ.
ತಮ್ಮ ಅಧಿಕೃತ ನಿವಾಸದಲ್ಲೇ ಔತಣ ಕೂಟ ಆಯೋಜಿಸಿದ್ದು, 2019 ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಔತಣಕೂಟದ ಆಯೋಜನೆ ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ ಆರ್ ಎಸ್ಎಸ್ ಹಾಗೂ ಸಂಘಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತರು ಹರ್ಯಾಣದ ಸೂರಜ್ ಕುಂಡ್ ನಲ್ಲಿ ಸಭೆ ಸೇರಿದ್ದು, ಎರಡು ದಿನಗಳು ನಡೆಯಲಿರುವ ಸಭೆಯಲ್ಲಿ ಆರ್ ಎಸ್ಎಸ್ ನ ಸಹ ಸಂಘಟನೆಗಳ ನಡುವಿನ ಸಮನ್ವಯತೆ ಹಾಗೂ 2019 ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಹತ್ವವೆನಿಸುವ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಹರ್ಯಾಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬಿಜೆಪಿಯ ನಾಯಕರೂ ಭಾಗಾವಹಿಸಲಿದ್ದು, ಆರ್ ಎಸ್ಎಸ್ ನ ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯ್ಯಾಜಿ ಜೋಷಿ, ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೋಪಾಲ್ ಭಾಗಿಯಾಗಿದ್ದಾರೆ. ಬಿಜೆಪಿ ಅಮಿತ್ ಶಾ ಸಹ ಹರ್ಯಾಣಗೆ ತೆರಳಿ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.