ಪ್ರಧಾನಿ ಮೋದಿ ಫಿಟ್, ದೇಶ ಅನ್ ಫಿಟ್: ಬಿಜೆಪಿ ವಿರುದ್ಧ ಅಜಂ ಖಾನ್ ವಾಗ್ದಾಳಿ
ದೇಶದಲ್ಲಿ ಮುಗ್ಧ ವ್ಯಕ್ತಿಗಳು, ಪತ್ರಕರ್ತರು ಹಾಗೂ ಸೈನಿಕರ ಹತ್ಯೆಗಳು ಎಗ್ಗಿಲ್ಲದೇ ನಡೆಯುತ್ತಿವೆ, ಇಂಥಹ ಸಂದರ್ಭದಲ್ಲಿ ಪ್ರಧಾನಿ ಮೋದಿ...
ಲಕ್ನೋ: ದೇಶದಲ್ಲಿ ಮುಗ್ಧ ವ್ಯಕ್ತಿಗಳು, ಪತ್ರಕರ್ತರು ಹಾಗೂ ಸೈನಿಕರ ಹತ್ಯೆಗಳು ಎಗ್ಗಿಲ್ಲದೇ ನಡೆಯುತ್ತಿವೆ, ಇಂಥಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಫಿಟ್ ನೆಸ್ ಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಕಿಡಿ ಕಾರಿದ್ದಾರೆ.
ಮುಗ್ದರು ಸೇರಿದಂತೆ ಹಲವು ಜನರ ಕಗ್ಗೊಲೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಮೋದಿ ಕುರೂವುದು- ಮೇಲೇಳುವುದು ಸೇರಿದಂತೆ ಹಲವು ರೀತಿಯ ವ್ಯಾಯಾಮ ಮಾಡುತ್ತಿದ್ದಾರೆ, ಪ್ರಧಾನಿ ಫಿಟ್ ಆಗುತ್ತಿದ್ದಾರೆ, ದೇಶ ಅನ್ ಫಿಟ್ ಆಗಿದೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿರುವ ಪ್ರಧಾನಿ ಮೋದಿ, ತಾವು ವ್ಯಾಯಾಮ ಮಾಡುವ ಹಾಗೂ ಯೋಗ ಅಭ್ಯಾಸ ಮಾಡುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಅವರ ಈ ವಿಡಿಯೋ ನೋಡಿರುವ ಅಜಂ ಖಾನ್ ಪ್ರತಿಕ್ರಿಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.