ದೇವಾಲಯದಲ್ಲಿ ಕುಸಿದು ಬಿದ್ದ ಅರ್ಚಕ
ಆಂಧ್ರಪ್ರದೇಶ: ಶಿವಲಿಂಗಕ್ಕೆ ಪೂಜೆ ಮಾಡುವ ವೇಳೆ ಗರ್ಭಗುಡಿಯಲ್ಲಿ ಅರ್ಚಕ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದದಲ್ಲಿ ನಡೆದಿದೆ.
ಗೋದಾವರಿ ಜಿಲ್ಲೆಯ ಭೀಮಾವರಂ ನಲ್ಲಿರುವ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಜೂನ್ 11 ರಂದು ಬೆಳಗ್ಗೆ 6 ಗಂಟೆಗೆ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ ವೇಳೆ, ಕಂಡುಕುರಿ ರಾಮಾ ರಾವ್ ಕುಸಿದು ಬಿದ್ದಿದ್ದಾರೆ, ಈ ದೃಶ್ಯ ದೇವಾಲಯದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕುಸಿದು ಬಿದ್ದ ಅವರನ್ನು ಉಳಿದ ಅರ್ಚಕರು ಎತ್ತುಕೊಂಡು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅರ್ಚಕರ ಪ್ರಾಣ ಗರ್ಭಗುಡಿಯಲ್ಲಿ ಹೋಗಿರುವುದರಿಂದ ಕೆಲವರು ಅದನ್ನು ಮಹಾನ್ ಸಾವು ಎಂದು ಪರಿಗಣಿಸಿದರೇ ಮತ್ತೆ ಕೆಲವರು ಅಪಶಕುನ ಎಂದು ಹೇಳಿದ್ದಾರೆ,
ಆಂಧ್ರ ಪ್ರದೇಶದ ಹಲವು ಪುರಾತನ ದೇವಾಲಯಗಳಲ್ಲಿ ಸೋಮೇಶ್ವರ ದೇವಾಲಯವೂ ಕೂಡ ಒಂದಾಗಿದ್ದು, ಮೃತಪಟ್ಟ ಆರ್ಚಕ ಕಳೆದ 40 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics