ಹೈದರಾಬಾದ್: ಅಮೆರಿಕದ ಶಿಕಾಗೋ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದನ್ನು ಎಫ್‌ಬಿಐ ಭೇದಿಸಿದ್ದು ಇದರಲ್ಲಿ ಟಾಲಿವುಡ್ ನಟಿಯರೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ತೆಲುಗು ಚಿತ್ರರಂಗದ ಪ್ರೊಡಕ್ಷನ್ ಮ್ಯಾನೇಜರ್ ಗಳಾಗಿರುವ ಕಿಶನ್ ಮೊದುಗು ಮುಡಿ ಅಲಿಯಾಸ್ ಶ್ರೀರಾಜ್ ಚೆನ್ನುಪತಿ, ಚಂದ್ರಕಲಾ ಪೂರ್ಣಿಮಾ ಮೊದುಗುಮುಡಿ ಅಲಿಯಾಸ್ ವೆಭಾ ಜಯಂ ಎಂಬ ದಂಪತಿಯನ್ನು ಮೇ 28ರಂದು ವಾಷಿಂಗ್ಟನ್ ಡಿಸಿಯಲ್ಲಿ ಬಂಧಿಸಲಾಗಿದೆ.
ಬಂಧಿತ ದಂಪತಿಗಳು ಹೈದರಾಬಾದ್ ಮೂಲದವರಾಗಿದ್ದು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ. ಅವಕಾಶಗಳಿಗಾಗಿ ಹಾತೊರೆಯುತ್ತಿರುವ ನಟಿಯರನ್ನು ಅಮೆರಿಕಕ್ಕೆ ಕರೆಯಿಸಿಕೊಂಡು ಅಮೆರಿಕದಲ್ಲಿ ನಡೆಯುವ ತೆಲುಗು ಭಾಷಿಗರ ಸಮಾರಂಭಗಳಿಗೆ ಕರೆದುಕೊಂಡು ಹೋಗಿ ಅಲ್ಲಿಗೆ ಬರುತ್ತಿದ್ದ ಶ್ರೀಮಂತ ತೆಲುಗು ವ್ಯಕ್ತಿಗಳಿಗೆ ಈ ನಟಿಯರನ್ನು ತೋರಿಸಿ ವ್ಯಾಪಾರ ಕುದುರಿಸುತ್ತಿದ್ದು ಎಂದು ಆರೋಪಿಸಲಾಗಿದೆ.
2017ರ ಮೇ 11ರಿಂದ 2018ರ ಜನವರಿ 22ರ ನಡುವಿನ ಪ್ರಕರಣ ಇದಾಗಿದ್ದು ಅಮೆರಿಕ ಗಡಿ ಭದ್ರತಾ ಪಡೆಗಳು ಮಾಹಿತಿಯ ಮೇರೆಗೆ ಎಪ್ರಿಲ್ ನಲ್ಲಿ ಮೆರಿಟೋ ಹೋಟೆಲ್ ಮೇಲೆ ದಾಳಿ ನಡೆಸಿದಾಗ ಕೊಠಡಿಯೊಂದರಲ್ಲಿ ಚಿಕ್ಕ ಪುಟ್ಟ ಕೈಬರಹದಲ್ಲಿ ಪ್ರಖ್ಯಾತ ತೆಲುಗು ನಟನೊಬ್ಬನ ಹೆಸರನ್ನು ಬರೆದು ರೂ. ನಂಬರ್ 2018-ಎರಡು ಬಾರಿ, ರೂಂ ನಂಬರ್ 404- ಒಂದು ಬಾರಿ ಎಂದು ಬರೆದಿತ್ತು. ಇದರ ಜಾಡು ಹಿಡಿದು ಹೊರಟ ಅಧಿಕಾರಿಗಳು ಇಡೀ ಜಾಲವನ್ನು ಬಯಲು ಮಾಡಿದ್ದಾರೆ.