ಉಗ್ರರಿಂದ ಅಪಹರಣಕ್ಕೀಡಾಗಿ ಸಾವನ್ನಪ್ಪಿದ ಯೋಧ ಔರಂಗಜೇಬ್ (ಸಂಗ್ರಹ ಚಿತ್ರ) 
ದೇಶ

'ನಿಮ್ಮ ಕೈಲಾಗದಿದ್ದರೆ ಹೇಳಿ, ಪಾಕ್ ಉಗ್ರರ ರುಂಡ ಚೆಂಡಾಡುತ್ತೇವೆ': ಹುತಾತ್ಮ ಯೋಧನ ಸಹೋದರನ ಆಕ್ರೋಶ

ನಿಮ್ಮ ಕೈಲಾಗದಿದ್ದರೆ ಹೇಳಿ, ನನ್ನ ಸಹೋದರ ಕೊಂದ ಉಗ್ರರ ವಿರುದ್ಧ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎಂದು ಹುತಾತ್ಮ ಯೋಧ ಔರಂಗಜೇಬ್ ಸಹೋದರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀನಗರ: ನಿಮ್ಮ ಕೈಲಾಗದಿದ್ದರೆ ಹೇಳಿ, ನನ್ನ ಸಹೋದರ ಕೊಂದ ಉಗ್ರರ ವಿರುದ್ಧ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎಂದು ಹುತಾತ್ಮ ಯೋಧ ಔರಂಗಜೇಬ್ ಸಹೋದರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಗ್ರರಿಂದ ಹತ್ಯೆಗೀಡಾದ ಯೋಧ ಔರಂಗಜೇಬ್ ನ ಅಂತ್ಯ ಸಂಸ್ಕಾರದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಹೋದರ, ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ಈ ಪೈಕಿ ವಿಫಲವಾಗಿದ್ದು, ನಿಮ್ಮ ಕೈಯಲ್ಲಿ ಸಾಧ್ಯವಾಗದಿದ್ದರೆ ಹೇಳಿ... ನಾವೇ ನನ್ನ ಸಹೋದರ ಸಾವಿನ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಸಹೋದರ ಸಾವಿಗೆ ಕಾರಣರಾದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಓರ್ವ ಯೋಧನ ಸಾವಿಗೆ ಅಲ್ಲಿ ನೂರು ಉಗ್ರರು ಸಾಯಬೇಕು. ಒಂದು ವೇಳೆ ಇದು ನಿಮ್ಮ ಕೈಯಲ್ಲಿ ಸಾಧ್ಯವಾಗದಿದ್ದರೆ ಹೇಳಿ, ನಾವು ಉಗ್ರರ ರುಂಡ ಚೆಂಡಾಡುತ್ತೇವೆ ಎಂದು ಸಹೋದರ ಹನೀಫ್ ಭಾವುಕರಾಗಿ ಹೇಳಿದ್ದಾರೆ. 
ರಂಜಾನ್ ಹಬ್ಬದ ನಿಮಿತ್ತ ಮನೆಗೆ ಆಗಮಿಸಿದ್ದ ಯೋಧನನ್ನು ಉಗ್ರರು ಅಪಹರಿಸಿದ್ದರು. ಬಳಿಕ ಆತನ ಶವ ಪುಲ್ವಾಮದಲ್ಲಿ ಪತ್ತೆಯಾಗಿತ್ತು. ನಿನ್ನೆ ರಜೌರಿಯಲ್ಲಿ ಆತನ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ದೆಹಲಿ-ಚೆನ್ನೈ ಇಂಡಿಗೋ ವಿಮಾನದಲ್ಲಿ ಬೆಂಕಿ; ಹೈದರಾಬಾದ್‌ ನಲ್ಲಿ ತುರ್ತು ಲ್ಯಾಂಡಿಂಗ್

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು