ಪುಣೆ; ಉಚಿತವಾಗಿ ತರಕಾರಿ ನೀಡದ ಅಪ್ರಾಪ್ತ ಬಾಲಕನೊಬ್ಬನಿಗೆ ಪೊಲೀಸ್ ಒಬ್ಬ 3 ತಿಂಗಳುಗಳ ಕಾಲ ಜೈಲಿಗೆ ಕಳುಹಿಸಿರುವ ಘಟನೆ ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆದಿದೆ.
ಪಾಟ್ನಾದಲ್ಲಿ ತರಕಾರಿ ಮಾರುತ್ತಿದ್ದ 14 ವರ್ಷ ಬಾಲಕನನ್ನು ಜೂ.19 ರಂದು ಪೊಲೀಸರು ಬಂಧನಕ್ಕೊಳಪಡಿಸಿ ಜೈಲಿಗೆ ಕಳುಹಿಸಿದ್ದಾರೆಂದು ಹೇಳಲಾಗುತ್ತಿದೆ.
ಬಾಲಕನ ತಂದೆ ಸುಖ್ಪಾಲ್ ಸಿಂಗ್ ಅವರು ಮಾತನಾಡಿ, ಮಾರ್ಚ್ 19 ನಮ್ಮ ಮಗ ಕಣ್ಮರೆಯಾಗಿದ್ದ. ಈ ವೇಳೆ ಆತನಿಗಾಗಿ ಹುಡುಕಾಟ ಆರಂಭಿಸಿದ್ದೆವು. ಬಳಿಕ ಪತ್ರಕಾರ್ ನಗರ ಪೊಲೀಸ್ ಠಾಣೆಯಲ್ಲಿನ ಪೊಲೀಸರು ಪುತ್ರನನ್ನು ಬೈಕ್ ಕಳ್ಳತನ ಪ್ರಕರಣ ಸಂಬಂಧ ಬಂಧನಕ್ಕೊಳಪಡಿಸಿರುವುದಾಗಿ ಹೇಳಿದರು. ಆಧಾರ್ ಕಾರ್ಡ್ ನಲ್ಲಿರುವ ಪ್ರಕಾರ ನನ್ನ ಮಗನ ವಯಸ್ಸು 14 ವರ್ಷ. ಆದರೆ, ಪೊಲೀಸರು ಎಫ್ಐಆರ್ ನಲ್ಲಿ 18 ವರ್ಷವೆಂದು ನಮೂದಿಸಿದ್ದಾರೆ. ಸುಖಾಸುಮ್ಮನೆ ಪೊಲೀಸರು ನಮ್ಮ ಮಗನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನನ್ನು ಜೈಲಿಗೆ ಕಳುಹಿಸಿದಿ ಇಂದಿಗೆ 3 ತಿಂಗಳು, ಮೂರು ದಿನವಾಗಿದೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಮಗನನ್ನು ಭೇಟಿಯಾದಾಗಾ, ಉಚಿತವಾಗಿ ತರಕಾರಿ ನೀಡದಿದ್ದಕ್ಕೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ನನ್ನನ್ನು ಜೈಲಿನಲ್ಲಿ ಇರಿಸಿದ್ದಾರೆಂದು ಹೇಳಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಪ್ರಕರಣವನ್ನು ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ತನಿಖೆಗೆ ಆದೇಶಸಿದ್ದಾರೆ. ಅಲ್ಲದೆ, 2 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮನು ಮಹಾರಾಜ್ ಅವರು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಪ್ರಕರಣದ ಬಗ್ಗೆ ಯಾವುದೇ ರೀತಿಯ ಮಾಹಿತಿಗಳು ಲಭ್ಯವಾಗಿಲ್ಲ. ಈ ಸಂಬಂಧ ಬಾಲಕನ ಪೋಷಕರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics