ಗೋ ಸಾಗಾಟಗಾರನ ಹತ್ಯೆ ಪ್ರಕರಣ: ಅಂಬ್ಯುಲೆನ್ಸ್ ಲಭ್ಯವಿರದ ಕಾರಣ ಪೋಲೀಸ್ ವಾಹನ ಬಳಕೆ, ಯುಪಿ ಪೋಲೀಸ್ 
ದೇಶ

ಗೋ ಸಾಗಾಟಗಾರನ ಹತ್ಯೆ ಪ್ರಕರಣ: ಅಂಬ್ಯುಲೆನ್ಸ್ ಲಭ್ಯವಿರದ ಕಾರಣ ಪೋಲೀಸ್ ವಾಹನ ಬಳಕೆ, ಯುಪಿ ಪೋಲೀಸ್

ಉತ್ತರ ಪ್ರದೇಶದ ಹಾಪುರ್ ನಲ್ಲಿ ಗೋ ಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ದಿನ ಸಂತ್ರಸ್ತನನ್ನು....

ಲಖನೌ(ಉತ್ತರ ಪ್ರದೇಶ)" ಉತ್ತರ ಪ್ರದೇಶದ ಹಾಪುರ್ ನಲ್ಲಿ ಗೋ ಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ದಿನ ಸಂತ್ರಸ್ತನನ್ನು ಗುಂಪೊಂದು ಪೋಲೀಸರ ಮುಂದೆ ಎಳೆದಾಡುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ಸಂಬಂಧ ಉತ್ತರ ಪ್ರದೇಶ ಪೋಲೀಸ್ ಇಲಾಖೆ ಕ್ಷಮೆ ಯಾಚಿಸಿದೆ.
ಸೋಮವಾರ ಪುಖುವಾ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಮೋಟಾರ್ ಸೈಕಲ್ ನಲ್ಲಿ ಆಗಮಿಸಿದ್ದ ಕಾಸಿಮ್ (45) ಮೇಲೆ ಹಲ್ಲೆ ನಡೆದಿದ್ದು ಅವರು ಹತ್ಯೆಯಾಗಿದ್ದರು
ಇದೀಗ ಉತ್ತರ ಪ್ರದೇಶ ಪೋಳೀಸ್ ಇಲಾಖೆ ಮಾಡಿರುವ ಟ್ವೀಟ್ ನಲ್ಲಿ ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿದ್ದಾರೆ.ಹಾಗೆಯೇ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಮೂವರು ಪೋಲೀಸರ ಕುರಿತಂತೆ ಪೋಲೀಸ್ ಲೈನ್ ನಿಂದ ಮಾಹಿತಿ ಕಲೆಹಾಕಲಾಗುವುದು., ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದೆ. 
"ಗಾಯಾಳುವನ್ನು ಶಪತ್ರೆಗೆ ಸ್ಥಳಾಂತರಿಸಲು ಪೋಲೀಸರು ಸ್ಥಳಕ್ಕಾಗಮಿಸಿದಾಗ ಈ ಚಿತ್ರ ತೆಗೆದುಕೊಳ್ಳಲಾಗಿದೆ ಎಂದು ಕಾಣುತ್ತಿದೆ. ಆ ಸಮಯದಲ್ಲಿ ಆಂಬುಲೆನ್ಸ್ ಲಭ್ಯವಿಲ್ಲದ ಕಾರಣದಿಂದಾಗಿ ಅನಿವಾರ್ಯವಾಗಿ ಸಂತ್ರಸ್ತನನ್ನು ಪೋಲೀಸ್ ವಾಹನದಲ್ಲೇ ರವಾನಿಸಬೇಕಾಗಿತ್ತು.ಪೋಲೀಸರು ಸಂವೇದನಾಶೀಲತೆಯಿಂದ ಈ ಕೃತ್ಯ ಎಸಗಿದ್ದಾರೆ. ಅವರು ಒಂದು ಜೀವ ಉಳಿಸುವ ಪ್ರಯತ್ನದಲ್ಲಿದ್ದರು.ಅವರಿಗೆ ಚಿತ್ರದಲ್ಲಿ ಸ್ಪಷ್ಟವಾಗಿರುವಂತೆ ಸಂಸ್ತ್ರಸ್ತನನ್ನು UP100 PRV, ನಲ್ಲಿ ಸಾಗಿಸಲಾಗಿದ್ದೆ"
ನೆರೆ ಹೊರೆಯವರ ಮೇಲೆ ಕಾಸಿಮ್ ಮತ್ತಾತನ ಸ್ನೇಹಿತರು ಹಲ್ಲೆ ನಡೆಸಿದ್ದ ಕಾರಣ ಅವ್ರೂ ಸಹ ಕಾಸಿಮ್ ಮೇಲೆ ಹಲ್ಲೆಗೆ ಮುಂದಾದರೆಂದು ಪೋಲೀಸರು ಹೇಳಿದ್ದಾರೆ.ಸಧ್ಯ ಪೋಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.ಗೋಹತ್ಯೆ ಸಂಬಂಧ ಕೆಲ ವದಂತಿಗಳು ಹರಡಿದ್ದವು, ಆದರೆ ತನಿಖೆ ವೇಳೆ ಅದು ನಿಜವೆಂದು ಕಂಡುಬಂದಿಲ್ಲ ಎಂದು ಎಸ್ಪಿ ಸಂಕಲ್ಪ್ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶನಿವಾರ ಶಾಸಕಾಂಗ ಪಕ್ಷದ ಸಭೆ, ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

ಸೌದಿಯಲ್ಲಿ ಗಲ್ಲು ಶಿಕ್ಷೆ: 20 ವರ್ಷಗಳ ಬಳಿಕ ಕೊನೆಗೂ ತಾಯಿಯ ಮಡಿಲು ಸೇರಿದ ಕೇರಳ ವ್ಯಕ್ತಿ, 28 ದಿನಗಳಲ್ಲೇ ಬದಲಾದ ಬದುಕು, ಅತೀ ದೊಡ್ಡ ಕ್ರೌಡ್ ಫಂಡಿಂಗ್ ಅಭಿಯಾನ!

SCROLL FOR NEXT