ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
ಪುಣೆ; ಆಹಾರ ಭದ್ರತೆಯಿಲ್ಲದೆಯೇ ರಾಷ್ಟ್ರದ ಭದ್ರತೆ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ.
ಪುಣೆಯಲ್ಲಿ ನಡೆಯುತ್ತಿರುವ 2 ದಿನಗಳ ರಾಷ್ಟ್ರೀಯ ಸಮಾಲೋಚನೆ ಸಮಾವೇಶದಲ್ಲಿ ಮಾತನಾಡಿರುವ ಅವರು, ಕೃಷಿ ಕ್ಷೇತ್ರವನ್ನು ಸಮರ್ಥನೀಯ ಹಾಗೂ ಲಾಭದಾಯಕ ಕ್ಷೇತ್ರವನ್ನಾಗಿ ಮಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಅಜೆಂಡಾ ಆಗಿದೆ ಎಂದು ಹೇಳಿದ್ದಾರೆ.
ಕೃಷಿ ಕ್ಷೇತ್ರವನ್ನು ಬಲಗೊಳಿಸಲು ಹಾಗೂ ಲಾಭದಾಯಕ ಕ್ಷೇತ್ರಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಆದ್ಯತೆಯನ್ನುನೀಡಬೇಕು. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಜಚಾರವಾಗಿದೆ. ಆಹಾರ ಭದ್ರತೆಯಿಲ್ಲದೆಯೇ ದೇಶದ ಭದ್ರತೆ ಸಾಧ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ರೈತರ ಕುರಿತು ಧನಾತ್ಮಕ ಚಿಂತನೆ ಮಾಡುವ ಸಮಯ ಬಂದಿದೆ. ಕೃಷಿ ಕ್ಷೇತ್ರದಲ್ಲಿ ಎದುರಾಗುವ ಹೊಸ ಸವಾಲುಗಳ ಪೈಕಿ ಒಂದೆಂದರೆ ಅದು ಸಮಸ್ಯೆ. ನಾವು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯಾಗಿದ್ದೇವೆ. ಹೀಗಾಗಿಯೇ ಇದು ರೈತರ ಆದಾಯವನ್ನು ಹೆಚ್ಚಿಸುತ್ತಿಲ್ಲ. ಕೃಷಿ ಕ್ಷೇತ್ರವನ್ನು ಲಾಭದಾಯಕ ವಲಯ ಮಾಡಿದಿದ್ದರೆ, ಹೆಚ್ಚು ಜನರನ್ನು ಆಕರ್ಷಿತರಾಗುವಂತೆ ಮಾಡಲು ಸಾಧ್ಯವಿಲ್ಲ. ಪ್ರಮುಖವಾಗಿ ಯುವಕರು ರೈತರಾಗುವುದಕ್ಕೆ ಮುಂದಾಗುವುದಿಲ್ಲ ಎಂದಿದ್ದಾರೆ.