ಮಂದಾಕಿನಿ ನದಿಯಲ್ಲಿ ಕಾಮಗಾರಿಯ ತ್ಯಾಜ್ಯ ಸುರಿಯುತ್ತಿರುವ ಚಿತ್ರ
ರುದ್ರಪ್ರಯಾಗ್: ಗಿರಿ ಕಂದರಗಳ ನಾಡು, ಪುಣ್ಯಕ್ಷೇತ್ರಗಳ ನೆಲೆವೀಡು ಉತ್ತರಖಂಡ್ ರಾಜ್ಯದ ರುದ್ರಪ್ರಯಾಗ್ ನಿಂದ ಕೇದಾರನಾಥ್ ವರೆಗೂ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿ ಮಂದಾಕಿನಿ ನದಿಯನ್ನು ಬಲಿಪಡೆಯುತ್ತಿದೆ.
ರಸ್ತೆ ಕಾಮಗಾರಿಯ ಅವಶೇಷಗಳು ಹಾಗೂ ಕೆಸರನ್ನು ಅಲ್ಲಿಯೇ ಹರಿಯುವ ಮಂದಾಕಿನಿ ನದಿಗೆ ಸುರಿಯುತ್ತಿದ್ದು, ನದಿ ತನ್ನ ಸಹಜ ಸೊಬಗನ್ನು ಕಳೆದುಕೊಳ್ಳುತ್ತಿದೆ.
ಚಾರ್ ದಾಮ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಶೇಷಗಳನ್ನು ಮಂದಾಕಿನಿ ನದಿಗೆ ಸುರಿಯಬಾರದೆಂದು ಜೂನ್ 12 ರಂದು ಉತ್ತರಖಂಡ್ ಹೈಕೋರ್ಟ್ ಹಾಗೂ ಮೇ 29 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ನೀಡಿವೆ. ಆದರೂ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ, ಕಾಮಗಾರಿಯಲ್ಲಿ ಬಳಸಿದ ತ್ಯಾಜ್ಯ ಸಾಮಾಗ್ರಿಗಳನ್ನು ನದಿಯಲ್ಲಿ ಹಾಕಲಾಗುತ್ತಿದೆ.
ಸೂಕ್ತ ಪರ್ಯಾಯ ಪ್ರದೇಶವನ್ನು ಗುರುತಿಸುವವೆರೆಗೂ ರಸ್ತೆ ಕಾಮಗಾರಿಯನ್ನು ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ನದಿಯ ದಂಡೆಯಿಂದ 500 ಮೀಟರ್ ದೂರದಲ್ಲಿರುವಂತೆ ಪರ್ಯಾಯ ಪ್ರದೇಶ ಕಂಡುಹಿಡಿಯುವಂತೆ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ, ಉತ್ತರಖಂಡ್ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಂದಾಯ ಏಜೆನ್ಸಿಗಳು ನಿರ್ದೇಶನ ಕೂಡಾ ನೀಡಿದ್ದವು.
ಪ್ರಸ್ತುತ ಪರ್ಯಾಯ ಪ್ರದೇಶ ಗುರುತಿಸದಿದ್ದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನದಿ ದಂಡೆ ಮೇಲೆ ರಸ್ತೆ ವಿಸ್ತರಣೆ, ರಸ್ತೆ ನಿರ್ಮಾಣದಂತಹ ಎಲ್ಲಾ ಕೆಲಸಗಳನ್ನು ನಿಲ್ಲಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಆದರೆ, ರುದ್ರಪ್ರಯಾಗ್ ನಿಂದ ಕೇದರ್ ನಾಥ್ ವರೆಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಿರಾಂತಕವಾಗಿ ಪ್ರತಿನಿತ್ಯ ನಡೆಯುತ್ತಿದೆ.
ನದಿಯಲ್ಲಿ ರಸ್ತೆ ಕಾಮಗಾರಿಯಲ್ಲಿ ಬಳಸಿದ ಸಾಮಾಗ್ರಿಗಳನ್ನು ಸುರಿಯುತ್ತಿರುವುದರಿಂದ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಬಹೆಂದು ಕೆಲ ಪರಿಸರವಾದಿಗಳು, ನಾಗರಿಕ ಸಮಾಜ ಸಂಘಟನೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ನಂತರ ಕೋರ್ಟ್ ನದಿ ದಂಡೆಯಲ್ಲಿ ಯಾವುದೇ ರಸ್ತೆ ಕಾಮಗಾರಿ ಕೈಗೊಳ್ಳದಂತೆ ನಿರ್ದೇಶನ ನೀಡಿತ್ತು.
888 ಕಿಲೋ ಮೀಟರ್ ದೂರದ ಚಾರ್ ದಾಮ್ ರಾಷ್ಟ್ರೀಯ ಹೆದ್ದಾರಿ ಯಮುನೊತ್ರಿ, ಗಂಗೋತ್ರಿ, ಕೇದರ್ ನಾಥ್ ಮತ್ತು ಬದ್ರಿನಾಥ್ ಸಂಪರ್ಕಿಸಲಿದೆ. ಚೀನಾದಲ್ಲಿನ ಕೈಲಾಸ ಮಾನಸ ಸರೋವರ ಮಾರ್ಗಕ್ಕೂ ಬಹುಮುಖ್ಯ ಪಾತ್ರ ವಹಿಸಲಿದೆ.
ಪ್ರಧಾನಮಂತ್ರಿ ನರೇಂದ್ರಮೋದಿ 2016 ಡಿಸೆಂಬರ್ ತಿಂಗಳಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಕಾಮಗಾರಿ ಕೈಗೊಳ್ಳಲಾಗಿದೆ. ಮೋದಿಯೇ ಈ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಮಾರ್ಚ್ 2020 ರೊಳಗೆ ಈ ಯೋಜನೆಯನ್ನು ಪೂರ್ಣಗೊಳ್ಳಿಸುವ ಗುರಿ ಹೊಂದಲಾಗಿದೆ. ಆದರೆ, 2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿಯೇ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಸರ್ಕಾರ ಒತ್ತಡ ಹಾಕುತ್ತಿದೆ.
ಅಂದಾಜು 19 ಮಿಲಿಯನ್ ಟನ್ ರಿಷಿಕೇಷಿ ಹಾಗೂ ಉತ್ತರಖಂಡ್ ಶ್ರೀನಗರ ಮಧ್ಯೆ ಉತ್ಪಾದನೆಯಾಗುತ್ತಿದೆ. ಭೂ ಪ್ರದೇಶ ಮಿತಗಳನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ಮುಂದುವರೆಸಬೇಕಾಗುತ್ತದೆ ಎಂದು ಹೇಳುವ ಪರಿಸರ ಪರಿಸರ ತಜ್ಞರು ಗಂಗಾ ಅವಹನ್ ಎಂಬ ಪ್ರರಾಂದೋಲನವನ್ನು ಸಹ ನಡೆಸುತ್ತಿದ್ದಾರೆ.