ಮುಂಬೈ: ಮೆದುಳು ನಿಷ್ಕ್ರಿಯವಾಗಿದ್ದ ಬಾಲಕನ ಹೃದಯ 4 ವರ್ಷದ ಬಾಲಕಿಗೆ ಜೀವ ನಿಡಿತು!
ಥಾಣೇ(ಮಹಾರಾಷ್ಟ್ರ): ಜೀವಂತ ಹೃದಯವೊಂದನ್ನು ಮುಂಬೈನಿಂದ 323.5 ಕಿಮೀ ದೂರದ ಔರಂಗಾಬಾದ್ ನಿಂದ 94 ನಿಮಿಷಗಳಲ್ಲಿ ಸಾಗಿಸುವ ಮೂಲಕ ನಾಲ್ಕು ವರ್ಷದ ಬಾಲಕಿಯ ಜೀವ ಉಳಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈನ ಫೊರ್ಟೀಸ್ ಆಸ್ಪತ್ರೆ ವೈದ್ಯರು ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ. ಜಲ್ನಾದ ಬಾಲಕಿ ಧನಶ್ರೀಯು ಇದೀಗ ತೀವ್ರ ನಿಗಾ ಘಟಕದಲ್ಲಿದ್ದು ಹೃದಯ ಕಸಿ ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ 13 ವರ್ಷದ ಬಾಲಕನೊಬ್ಬನನ್ನು ಔರಂಗಾಬಾದ್ ಮಹಾತ್ಮಾ ಗಾಂಧಿ ಮೆಡಿಕಲ್ ಆಸ್ಪತ್ರೆಗೆ ದಖಲಿಸಲಾಗಿತ್ತು. ಇದೀಗ ಆತನ ಹೃದಯವನ್ನೇ ನಾಲ್ಕರ ಬಾಲಕಿಗೆ ಕಸಿ ಮಾಡಲಾಗಿದೆ.
ಶುಕ್ರವಾರ ಮಧ್ಯಾಹ್ನ 1.30ಕ್ಕೆ ಔರಂಗಾಬಾದ್ ವಿಮಾನ ನಿಲ್ದಾಣಕ್ಕೆ ಹೃದಯವನ್ನು ರವಾನಿಸಲಾಗಿದೆ. ವಿಮಾನ ನಿಲ್ದಾಣದಿಂದ ಆಸ್ಪತ್ರೆಯು 4.8 ಕಿ.ಮೀ ಅಂತರದಲ್ಲಿದ್ದು ಕೇವಲ ನಾಲ್ಕು ನಿಮಿಷಗಳಲ್ಲಿ ಹೃದಯವನ್ನು ಸಾಗಾಟ ಮಾಡಲಾಗಿದೆ. ಅಲ್ಲಿಂದ ವಿಮಾನದಲ್ಲಿ ಹೃದಯವನ್ನು ಸುಮಾರು 3.05ರ ಹೊತ್ತಿಗೆ ಮುಂಬೈಗೆ ತಲುಪಿಸಲಾಗಿದೆ.
ಮುಂಬೈ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ 18 ಕಿ.ಮೀ. ಅಂತರವಿದ್ದು ರಸ್ತೆಯುದ್ದಕ್ಕೆ ತಡೆರಹಿತ ಗ್ರೀನ್ ಕಾರಿಡಾರ್ ರಚನೆ ಮಾಡಲಾಗಿತ್ತು. ಹೀಗೆ ವ್ಯವಸ್ಥೆ ಮಾಡಿದ ಮಾರ್ಗದಲ್ಲಿ ಕೇವಲ 19 ನಿಮಿಷಗಳಲ್ಲಿ ಹೃದಯವನ್ನು ಫೊರ್ಟೀಸ್ ಆಸ್ಪತ್ರೆಗೆ ತಲುಪಿಸಲಾಯಿತು.
ಒಟ್ಟು 323.5 ಕಿ.ಮೀ ದೂರವನ್ನು1 ಗಂಟೆ 34 ನಿಮಿಷಗಳಲ್ಲಿ ಮುಟ್ಟಿದ್ದು ಮಧ್ಯಾಹ್ನ 3.24ಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos