ಆರ್ ಕೆ ಸಿಂಗ್ 
ದೇಶ

ಎಸಿ ತಾಪಮಾನ 24 ಡಿಗ್ರಿ ನಿಗದಿ ಮಾಡುವುದರಿಂದ ವಿದ್ಯುತ್ ಉಳಿತಾಯ: ಕೇಂದ್ರ ಸಚಿವ

ಹವಾನಿಯಂತ್ರಕ(ಎಸಿ)ದ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್ ಗೆ ನಿಗದಿಪಡಿಸುವ ತಮ್ಮ ನಿರ್ಧಾರವನ್ನು....

ನವದೆಹಲಿ: ಹವಾನಿಯಂತ್ರಕ(ಎಸಿ)ದ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್ ಗೆ ನಿಗದಿಪಡಿಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ವಿದ್ಯುತ್ ಸಚಿವ  ಆರ್ ಕೆ ಸಿಂಗ್ ಅವರು, ಇದರಿಂದ ವಿದ್ಯುತ್ ಮತ್ತು ಹಣ ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ.
ಎಸಿ ತಾಪಮಾನವನ್ನು 18ರ ಬದಲು 24 ಡಿಗ್ರಿ ಸೆಲ್ಸಿಯಸ್ ಗೆ ನಿಗದಿ ಮಾಡುವುದರಿಂದ ಶೇ.36ರಷ್ಟು ವಿದ್ಯುತ್ ಉಳಿತಾಯವಾಗಲಿದೆ ಮತ್ತು ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಸರ್ಕಾರದ ಕ್ರಮದ ಬಗ್ಗೆ ಹವಾನಿಯಂತ್ರಕ ತಯಾರಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಡೀಫಾಲ್ಟ್ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್ ಗೆ ಇಳಿಸಲಾಗುವುದು ಎಂದು ಸಿಂಗ್ ಅವರು ಎಎನ್ಐಗೆ ತಿಳಿಸಿದ್ದಾರೆ.
ಮುಂದಿನ ದಶಕಗಳಲ್ಲಿ ಇಂಧನ ಪೂರೈಕೆಗೆ ಹೆಚ್ಚು ಬೇಡಿಕೆ ಉಂಟಾಗಲಿದ್ದು, ಇಂಧನ ಕ್ಷಮತೆಯನ್ನು ಉತ್ತೇಜಿಸಲು ಹಾಗೂ ಗ್ರೀನ್  ಹೌಸ್ ಗ್ಯಾಸ್ ಎಮಿಷನ್ ನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇತ್ತೀಚಿಗೆ ಕೇಂದ್ರ ವಿದ್ಯುತ್ ಸಚಿವಾಲಯ ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?