ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ: ಸಮೀಕ್ಷೆ
ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂಬದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ...
ಲಂಡನ್: ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂಬದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಥಾಮ್ಸನ್ ರಾಯಿಟರ್ಸ್ ಫೌಂಡೇಷನ್ ಸಮೀಕ್ಷೆ ಪ್ರಕಾರ ಆಫ್ಘಾನಿಸ್ತಾನ ಮತ್ತು ಸಿರಿಯಾಗಿಂತ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂಬ ಸಂಗತಿ ಬಹಿರಂಗಗೊಂಡಿದೆ.
ಮಹಿಳೆಯರ ಸಮಸ್ಯೆ ಕುರಿತಂತೆ ಒಟ್ಟಾರೆ 548 ಜಾಗತಿಕ ತಜ್ಞರು ಸಮೀಕ್ಷೆ ನಡೆಸಿದ್ದು ಭಾರತ ಮೂಲದ 43 ಮಹಿಳೆಯರಿಗೆ ಆರೋಗ್ಯ ರಕ್ಷಣೆ, ಆರ್ಥಿಕ ಸಂಪನ್ಮೂಲಗಳು ಮತ್ತು ತಾರತಮ್ಯದ ಪ್ರದೇಶ, ಸಾಂಪ್ರದಾಯಿಕ ಆಚರಣೆ, ಲೈಂಗಿಕ ಹಿಂಸಾಚಾರ, ಅಶ್ಲೀಲ ಹಿಂಸಾಚಾರ ಮತ್ತು ಮಾನವ ಕಳ್ಳಸಾಗಣೆ ಸಂಬಂಧಿಸಿದಂತೆ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗಿತ್ತು.
ಮಾನವ ಕಳ್ಳಸಾಗಣೆ, ಲೈಂಗಿಕ ಕಿರುಕುಳ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಬುಡಕಟ್ಟು ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಭಾರತ ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಎಂಬ ಅಂಶ ಬೆಳಕಿಗೆ ಬಂದಿದೆ.
2011ರಲ್ಲಿ ಇದೇ ಥಾಮ್ಸನ್ ರಾಯಿಟರ್ಸ್ ನಡೆಸಿದ್ದ ಮಹಿಳೆ ಅಪಾಯಕಾರಿ ರಾಷ್ಟ್ರಗಳ ಪೈಕಿ ಭಾರತ ಪಾಕಿಸ್ತಾನಕ್ಕಿಂತ ಹಿಂದಿದ್ದು ನಾಲ್ಕನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಪಾಕಿಸ್ತಾನ ಆರನೇ ಸ್ಥಾನ ಗಳಿಸಿದೆ.