ದೇಶ

ಉಗ್ರರ ಬೆದರಿಕೆ ನಡುವಲ್ಲೇ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆ ಹೊರಟ ಯಾತ್ರಿಕರು

Manjula VN
ಜಮ್ಮು; ಉಗ್ರರ ಬೆದರಿಕೆ ನಡುವಲ್ಲೇ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರಿಕರ ಮೊದಲ ತಂಡ ಜಮ್ಮುವಿನ ಬೇಸ್ ಕ್ಯಾಂಪ್ ನಿಂದ ಯಾತ್ರೆಯನ್ನು ಆರಂಭಿಸಿದೆ. 
ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿಬಿಆರ್ ಸುಬ್ರಮಣಿಯನ್ ಸ್ವಾಮಿ, ರಾಜ್ಯಪಾರ ಸಲಹೆಗಾರರಾದ ಬಿಬಿ. ವ್ಯಾಸ್ ಮತ್ತು ವಿಜಯ್ ಕುಮಾರ್ ಅವರು ಮೊದಲ ಬ್ಯಾಚ್'ನ ಅಮರನಾಥ ಯಾತ್ರೆಗೆ ಚಾಲನೆ ನೀಡಿದರು. 
ಉಗ್ರರ ಬೆದರಿಕೆಗಳನ್ನು ಲೆಕ್ಕಿಸದ ಜನತೆ ಅಮರನಾಥ ದರ್ಶನ ಪಡೆಯಲು ಮುಂದಾಗಿದ್ದಾರೆ. 60 ದಿನಗಳ ಅಮರನಾಥ ಯಾತ್ರೆ ನಡೆಯಲಿದೆ. 
ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತೀಯೊಂದು ಕ್ಷೇತ್ರದಲ್ಲಿ ಭದ್ರತೆಗಳನ್ನು ಪರಿಶೀಲಿಸಲಾಗಿದೆ. ಆಧುನಿಕ ತಂತ್ರಜ್ಞಾನ, ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ಜನಶಕ್ತಿ ಕೂಡ ಹೆಚ್ಚಾಗಿದೆ ಎಂದು ಅಧಿಕಾರಿ ಎ.ವಿ.ಚೌಹಾಣ್ ಅವರು ಹೇಳಿದ್ದಾರೆ. 
ಯಾತ್ರೆಗೆ ಯಾವುದೇ ರೀತಿಯ ಉಗ್ರರ ಬೆದರಿಕೆಗಳಿಲ್ಲ. ಎಂದಿನಂದೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ, ಯಾವುದೇ ರೀತಿಯ ದಾಳಿ ನಡೆದರೂ ಅದನ್ನು ಎದುರಿಸಲು ಭದ್ರತಾ ಪಡೆಗಳು ಸಿದ್ಧವಾಗಿವೆ. ಎಂದು ತಿಳಿಸಿದ್ದಾರೆ. 
ಯಾತ್ರಿಕರೊಬ್ಬರು ಮಾತನಾಡಿ, ಅಮರನಾಥ ಯಾತ್ರೆಗೆ ಹೋಗುತ್ತಿರುವುದಕ್ಕೆ ಬಹಳ ಸಂತಸವಿದೆ. ಯಾವುದಕ್ಕೂ ನಮಗೆ ಭಯವಿಲ್ಲ. ಭದ್ರತಾ ಪಡೆಗಳು ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತೀವರ್ಷ ಭದ್ರತೆಯಲ್ಲಿ ಸುಧಾರಣೆಗಳು ಕಾಣುತ್ತಿವೆ ಎಂದಿದ್ದಾರೆ. 
ಕಳೆದ ವರ್ಷ ಜು.10 ರಂದು ಅನಂತ್ ನಾಗ್ ಜಿಲ್ಲೆಯಲ್ಲಿ ಹೋಗುತ್ತಿದ್ದ ಬಸ್ ವೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ 9 ಮಂದಿ ಅಮರನಾಥ ಯಾತ್ರಿಕರು ಸಾವನ್ನಪ್ಪಿದ್ದರಲ್ಲದೆ, 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 
SCROLL FOR NEXT