ದೇಶ

ಒಂದು ದೇಶ ಒಂದು ಚುನಾವಣೆ: ಮೋದಿ ಪ್ರಸ್ತಾವನೆಗೆ ಬಿಜೆಡಿ ಮುಖಂಡ ಪಟ್ನಾಯಕ್ ಸಮ್ಮತಿ

Raghavendra Adiga
ಭುವನೇಶ್ವರ(ಒಡಿಇಶಾ): ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಒಟ್ಟಾಗಿ ಚುನಾವಣೆ ನಡೆಸುವ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ’ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವನೆಯನ್ನು ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಬೆಂಬಲಿಸಿದ್ದಾರೆ.
2004 ರಿಂದ ಲೋಕಸಭೆ ಚುನಾವಣೆ ಜತೆ ಜತೆಗೇ ಒಡಿಶಾ ವಿಧಾನಸಭೆಗೆ ಚುನಾವಣೆ ನಡೆಯುತ್ತಾ ಬಂದಿದೆ.
ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಅತ್ಯವಶ್ಯಕ ಎಂದಿರುವ ಪಟ್ನಾಯಕ್  "ನಾವು ಜನರ ಕೆಲಸ ಮಾಡಲು ಆಯ್ಕೆಯಾಗಿದ್ದೇವೆ.  ವರ್ಷದುದ್ದಕ್ಕೂ ಚುನಾವಣೆಗಳು ನಡೆದರೆ ಅಭಿವೃದ್ಧಿ ಕೆಲಸಗಳಿಗೆ ತೊಂದರೆ, ಅಡಚಣೆಯುಂಟಾಗಲಿದೆ.ಆದ್ದರಿಂದ ನಾವು ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಸುವ ಯೋಜನೆಯನ್ನು ಬೆಂಬಲಿಸುತ್ತೇನೆ" ಎಂದರು.
ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವದಕ್ಕೆ ಪ್ರಧಾನಿ ಮೋದಿ ನೀಡಿರುವ ಪ್ರಸ್ತಾವನೆಗೆ ತಮ್ಮ ಬೆಂಬಲ ಇದೆ ಎಂದು ಪಟ್ನಾಯಕ್ ತಿಳಿಸಿದ್ದಾರೆ.
ಜುಲೈ  7ರಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ರಾಜಕೀಯ ಪಕ್ಷಗಳು ಮತ್ತು ಇತರ ಮಧ್ಯಸ್ಥಗಾರರ ಜೊತೆ ಏಕಕಾಲಿಕ ಚುನಾವಣೆ ನೀತಿ ಸಂಬಂಧ ಕಾನೂನು ಆಯೋಗ ಸಭೆ ನಡೆಸಲಿದೆ. ಈ ಸಭೆಗೆ ಮುನ್ನ ಪಟ್ನಾಯಕ್ ಅವರ ಅಭಿಪ್ರಾಯ ತಿಳಿಸುವಂತೆ ಲಾ ಕಮಿಷನ್ ಮನವಿ ಮಾಡಿತ್ತು.
SCROLL FOR NEXT