ಏರ್ ಇಂಡಿಯಾ 
ದೇಶ

ಮುಂಬೈನ ಏರ್ ಇಂಡಿಯಾ ಪ್ರಮುಖ ಕಟ್ಟಡ ಮಾರಲು ಮುಂದಾದ ಕೇಂದ್ರ!

ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೋಟ್ಯಂತರ ರುಪಾಯಿ ನಷ್ಟದಲ್ಲಿದ್ದು ನಿಧಿ ಸಂಗ್ರಹಣೆಗಾಗಿ ಕೇಂದ್ರ ಸರ್ಕಾರ ಮುಂಬೈನಲ್ಲಿರುವ ಏರ್ ಇಂಡಿಯಾದ ಕಟ್ಟಡವನ್ನು ಮಾರಲು ಯೋಚಿಸಿದೆ...

ನವದೆಹಲಿ: ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೋಟ್ಯಂತರ ರುಪಾಯಿ ನಷ್ಟದಲ್ಲಿದ್ದು ನಿಧಿ ಸಂಗ್ರಹಣೆಗಾಗಿ ಕೇಂದ್ರ ಸರ್ಕಾರ ಮುಂಬೈನಲ್ಲಿರುವ ಏರ್ ಇಂಡಿಯಾದ ಕಟ್ಟಡವನ್ನು ಮಾರಲು ಯೋಚಿಸಿದೆ. 
ದೇಶದ ಅತೀ ದೊಡ್ಡ ಬಂದರೂ ಸರ್ಕಾರಿ ಸಾಮ್ಯದ ಜವಾಹರ್ ನೆಹರ ಪೋರ್ಟ್ ಟ್ರಸ್ಟ್(ಜೆಎನ್ಪಿಟಿ)ಗೆ ಮುಂಬೈನಲ್ಲಿರುವ ಐತಿಹಾಸಿಕ ಏರ್ ಇಂಡಿಯಾ ಕಟ್ಟಡವನ್ನು ಮಾರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. 
ಅಧಿಕೃತ ಮೂಲಗಳ ಪ್ರಕಾರ, ಈ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂಗೀಕಾರ ಪಡೆದಿದ್ದು ಈ ಕ್ರಮಗಳನ್ನು ಕೈಗೊಳ್ಳಲು ಮಂತ್ರಿಮಂಡಲ ಸಮಿತಿಯನ್ನು ರಚಿಸಲಾಗಿದೆ. 
ಮುಂಬೈನ ನಾರಿಮನ್ ಪಾಯಿಂಟ್ ನಲ್ಲಿರುವ 23 ಅಂತಸ್ತಿನ ಏರ್ ಇಂಡಿಯಾದ ಈ ಕಟ್ಟಡ ಏರ್ಲೈನ್ಸ್ ನ ಪ್ರಧಾನ ಕಚೇರಿಯಾಗಿದೆ. ಇದು ಏರ್ ಇಂಡಿಯಾದ ಪ್ರಧಾನ ಆಸ್ತಿಯಾಗಿದ್ದು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ. 
ಕಟ್ಟಡದ ಮೌಲ್ಯವನ್ನು ನಿರ್ಧರಿಸಲು ನಾಗರಿಕ ವಿಮಾನಯಾನ ಮತ್ತು ಶಿಪ್ಪಿಂಗ್ ಸಚಿವಾಲಯಗಳ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. 
ಏರ್ ಇಂಡಿಯಾ ಮತ್ತು ಜೆಎನ್ಪಿಟಿ ಎರಡು ನಾಗರಿಕ ವಿಮಾನಯಾನ ಮತ್ತು ಶಿಪ್ಪಿಂಗ್ ಸಚಿವಾಲಯಗಳ ಅಡಿಯಲ್ಲಿ ಬರುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?