ಶಂಕಿತ ಆರೋಪಿಗಳು 
ದೇಶ

ಎಲ್ ಇಟಿ ಉಗ್ರ ನವೀದ್, ಇಬ್ಬರು ಸ್ಥಳೀಯ ಉಗ್ರರಿಂದ ಶುಜಾತ್ ಬುಖಾರಿ ಹತ್ಯೆ: ಕಾಶ್ಮೀರ ಪೊಲೀಸ್

ಲಷ್ಕರ್ -ಇ- ತೊಯಿಬಾ ಉಗ್ರ ನವೀದ್ ಜಟ್ಟ್ ಹಾಗೂ ಇತರ ಇಬ್ಬರು ಸ್ಥಳೀಯ ಉಗ್ರರು ಸೇರಿ 'ರೈಸಿಂಗ್ ಕಾಶ್ಮೀರ್‌' ದಿನಪತ್ರಿಕೆಯ...

ಶ್ರೀನಗರ: ಲಷ್ಕರ್ -ಇ- ತೊಯಿಬಾ ಉಗ್ರ ನವೀದ್ ಜಟ್ಟ್ ಹಾಗೂ ಇತರ ಇಬ್ಬರು ಸ್ಥಳೀಯ ಉಗ್ರರು ಸೇರಿ 'ರೈಸಿಂಗ್ ಕಾಶ್ಮೀರ್‌' ದಿನಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಬುಧವಾರ ಕಾಶ್ಮೀರ ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಮೂಲದ ನವೀದ್ ಜಟ್ಟ್ ಕಳೆದ ಫೆಬ್ರವರಿ 6ರಂದು ಶ್ರೀನಗರದ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಉಗ್ರನಾಗಿದ್ದು, ಇತರು ಇಬ್ಬರು ಸ್ಥಳೀಯ ಉಗ್ರರು ಬುಖಾರಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂನ್ 14ರಂದು ಇಲ್ಲಿನ ಪ್ರೆಸ್‌ ಕಾಲೊನಿಯಲ್ಲಿ ಆಂಗ್ಲ ದೈನಿಕದ ಸಂಪಾದಕ ಶುಜಾತ್‌ ಬುಖಾರಿ ಹಾಗೂ ಅವರ ಇಬ್ಬರು ಖಾಸಗಿ ಭದ್ರತಾ ಅಧಿಕಾರಿಗಳನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. 
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಿ.ಸಿ ಟಿ.ವಿಯ ದೃಶ್ಯಗಳನ್ನು ಆಧರಿಸಿ ಹಂತಕರನ್ನು ಗುರುತಿಸಿದ್ದು, ಮೂವರು ಬೈಕ್‌‌ನಲ್ಲಿ ತೆರಳುತ್ತಿರುವವರ ಚಲನವಲನಗಳನ್ನು ಗಮನಿಸಿ ಶಂಕಿತರ ಛಾಯಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ: ಬರ ನಿರ್ವಹಣೆಗಾಗಿ ಶೇ. 50ರಷ್ಟು ಮಧ್ಯಂತರ ಪರಿಹಾರ ಬಿಡುಗಡೆಗೆ ಒತ್ತಾಯ!