ಉತ್ತರ ಪ್ರದೇಶ: ಪಕ್ಷದ ವಕ್ತಾರರ ನೇಮಕಕ್ಕೆ ಲಿಖಿತ ಪರೀಕ್ಷೆ ನಡೆಸಿದ ಕಾಂಗ್ರೆಸ್! 
ದೇಶ

ಉತ್ತರ ಪ್ರದೇಶ: ಪಕ್ಷದ ವಕ್ತಾರರ ನೇಮಕಕ್ಕೆ ಲಿಖಿತ ಪರೀಕ್ಷೆ ನಡೆಸಿದ ಕಾಂಗ್ರೆಸ್!

ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ದೇಶಾದ್ಯಂತ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕಿರುವ ವಕ್ತಾರರ ನೇಮಕದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

ಲಖನೌ: ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ದೇಶಾದ್ಯಂತ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕಿರುವ ವಕ್ತಾರರ ನೇಮಕದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಲಿಖಿತ ಪರೀಕ್ಷೆ ಮೂಲಕ ಪಕ್ಷದ ವಕ್ತಾರರನ್ನು ನೇಮಕ ಮಾಡಲು ಮುಂದಾಗಿದೆ. 
ಉತ್ತರ ಪ್ರದೇಶದ ಕಾಂಗ್ರೆಸ್ ಘಟಕಕ್ಕೆ ವಕ್ತಾರರನ್ನು ನೇಮಕ ಮಾಡುವುದಕ್ಕೂ ಮುನ್ನ ಪ್ರಸಕ್ತ ವಿದ್ಯಮಾನಗಳ ಕುರಿತ ಜ್ಞಾನವನ್ನು ಪರೀಕ್ಷಿಸಲು ಕಾಂಗ್ರೆಸ್ ಮುಂದಾಗಿದ್ದು, ಲಿಖಿತ ಪರೀಕ್ಷೆಯನ್ನು ನಡೆಸಿದೆ.  ಯುವಕರು, ಪಳಗಿದ ರಾಜಕಾರಣಿಗಳೂ ಸೇರಿದಂತೆ 70 ಕಾಂಗ್ರೆಸ್ ಪಕ್ಷದ ನಾಯಕರು ವಕ್ತಾರರಾಗಲು ಪರೀಕ್ಷೆ ಎದುರಿಸಿದ್ದಾರೆ. 
ಲಿಖಿತ ಪರೀಕ್ಷೆಯ ನಂತರ ಪರೀಕ್ಷೆ ಎದುರಿಸಿದವರಿಗೆ ಸಂದರ್ಶನವೂ ಇತ್ತು. ಸುಮಾರು 14 ಪ್ರಶ್ನೆಗಳಿದ್ದು, ರಾಜ್ಯದಲ್ಲಿರುವ ಜಿಲ್ಲೆ, ಬ್ಲಾಕ್ ಗಳು,  ಲೋಕಸಭಾ ಸದಸ್ಯರ ಸಂಖ್ಯೆ, ವಿಧಾನಸಭಾ ಸದಸ್ಯರ ಬಲಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ವಿಫಲವಾಗಿರುವ ಪ್ರಮುಖ ಅಂಶಗಳನ್ನು ವಿವರಿಸಲು ಹಾಗೂ ಮನಮೋಹನ್ ಸಿಂಗ್ ಸರ್ಕಾರದ ಸಾಧನೆಯನ್ನು ವಿವರಿಸುವಂತೆ ಸಂದರ್ಶನದಲ್ಲಿ ಕೇಳಲಾಗಿತ್ತು. 
2019 ರ ಲೋಕಸಭಾ ಚುನಾವಣೆ ಮಹತ್ವದ್ದಾಗಿರುವುದರಿಂದ ಕಾಂಗ್ರೆಸ್ ಪಕ್ಷ ಎಚ್ಚರಿಕೆಯಿಂದ ತನ್ನ ವಕ್ತಾರರನ್ನು ನೇಮಕ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಲಿಖಿತ ಪರೀಕ್ಷೆ ಮೂಲಕ ಪಕ್ಷದ ವಕ್ತಾರರನ್ನು ನೇಮಕ ಮಾಡಲು ಮುಂದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮುಂಬೈ-ಅಹಮದಾಬಾದ್ ಮಾತ್ರವಲ್ಲ, ಭಾರತದಲ್ಲಿ 7000 ಕಿ.ಮೀ ಬುಲೆಟ್ ರೈಲು ಓಡಲಿದೆ: ಜಪಾನ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಹಿಂದೂ ಮಹಿಳೆಯರ ಮೇಲೆ '3 ಮಕ್ಕಳ ಸಿದ್ಧಾಂತ'ದ ಹೊರೆ ಹೇರಬೇಡಿ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ

ಡಿಸೆಂಬರ್‌ನಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ

ಭಾರತದ ಜಿಡಿಪಿ ಪ್ರಬಲ ಜಿಗಿತ: ಮೊದಲ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಬೆಳವಣಿಗೆ

ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದ PV Sindhu: ಇಂಡೋನೇಷ್ಯಾದ ಶಟ್ಲರ್ ಕುಸುಮಾ ವಿರುದ್ಧ ಸೋಲು!

SCROLL FOR NEXT