ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಹಾಗೂ ಸೈಫುದ್ದೀನ್ ಸೊಜ್
ನವದೆಹಲಿ; ಭಾರತೀಯ ಸೇನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಶುಕ್ರವಾರ ತಿಳಿದುಬಂದಿದೆ.
ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಹಾಗೂ ಸೈಫುದ್ದೀನ್ ಸೊಜ್ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ವರದಿಗಳು ತಿಳಿಸಿವೆ.
ಕಾಂಗ್ರೆಸ್ ಇಬ್ಬರು ನಾಯಕರ ವಿರುದ್ಧ ರಾಜಧಾನಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಹೇಳಿಕೆ ನೀಡಿದ್ದ ಗುಲಾಂ ನಬಿ ಆಜಾದ್ ಅವರು, ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಉಂಟಾಗುವ ಸಾವಿಗಿಂತಲೂ ಹೆಚ್ಚಾಗಿ ಸೇನಾ ಕಾರ್ಯಾಚರಣೆಯಿಂದಲೇ ಜನರು ಸಾವನ್ನಪ್ಪುತ್ತಿದ್ದಾರೆ. ಯೋಧರ ದಾಳಿ, ಉಗ್ರರಿಗಿಂತ ಹೆಚ್ಚಾಗಿ ಜನಸಾಮಾನ್ಯರನ್ನೇ ಗುರಿಯಾಗಿಸಿದೆ. ಉದಾಹರಣೆಗೆ ಪುಲ್ವಾಮಾದಲ್ಲಿ ಯೋಧರ ದಾಳಿಗೆ ಬಲಿಯಾಗಿದ್ದು, ಓರ್ವ ಉಗ್ರನಾಗಿದ್ದರೆ, ಅದೇ ವೇಳೆ 13 ಅಮಾಯಕ ನಾಗರೀಕರು ಸಾವನ್ನಪ್ಪಿದ್ದಾರೆಂದು ಹೇಳಿದ್ದರು.
ಕಾಶ್ಮೀರ ವಿವಾದ ಕುರಿತಂತೆ ಪಾಕಿಸ್ತಾನ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ಮಾಜಿ ಸಚಿವ ಸೈಫುದ್ದೀನ್ ಸೋಜ್ ಅವರು ಸಮರ್ಥಿಸಿಕೊಂಡಿದ್ದರು.