'ಕ್ರೂರ ಹುಲಿ'ಯನ್ನು ಕಾಡಿಗಟ್ಟುವ ಸಮಯ ಬಂದಿದೆ; ಹೆಗಡೆ ಹೇಳಿಕೆಗೆ ಮೊಯ್ಲಿ ತಿರುಗೇಟು
ಹುಲಿ ಕ್ರೂರವಾಗಿದ್ದು, ಅದನ್ನು ಮರಳು ಕಾಡಿಗಟ್ಟುವ ಸಮಯ ಬಂದಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿಯವರು ಶುಕ್ರವಾರ ತಿರುಗೇಟು ನೀಡಿದ್ದಾರೆ...
ಬೆಂಗಳೂರು; ಹುಲಿ ಕ್ರೂರವಾಗಿದ್ದು, ಅದನ್ನು ಮರಳು ಕಾಡಿಗಟ್ಟುವ ಸಮಯ ಬಂದಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿಯವರು ಶುಕ್ರವಾರ ತಿರುಗೇಟು ನೀಡಿದ್ದಾರೆ.
ವಿರೋಧ ಪಕ್ಷಗಳನ್ನು ಕಾಗೆ, ಕೋತಿ ಮತ್ತು ನರಿಗಳಿಗೆ ಹೋಲಿಸಿದ್ದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಹುಲಿ ಕ್ರೂರವಾಗಿದ್ದು, ಅದನ್ನು ಮರಳಿ ಕಾಡಿಗೆ ಅಟ್ಟಬೇಕಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಂತರ್ ಕುಮಾರ್ ಹೆಗಡೆಯವರು ನೀವೆಲ್ಲಾ ಇದೀಗ ಪ್ಲಾಸ್ಟಿಕ್ ಖುರ್ಚಿ ಮೇಲೆ ಕುಳಿತಿದ್ದೀರಿ. ಇದು 70 ವರ್ಷಗಳಿಂದ ಕಾಂಗ್ರೆಸ್ ನೀಡಿದ ಫಲವಾಗಿದೆ. 70 ವರ್ಷಗಳಿಂದ ನಾವು ಆಡಳಿತ ನಡೆಸಿದ್ದರೆ ನೀವೀಗ ಬೆಳ್ಳಿ ಖುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದಿರಿ ಎಂದು ಹೇಳಿದ್ದರು. ಅಲ್ಲದೆ, ವಿರೋಧ ಪಕ್ಷಗಳನ್ನು ಕಾಗೆ, ಕೋತಿ ಮತ್ತು ನರಿಗಳಿಗೆ ಹೋಲಿಸಿದ ಅವರು, ಕಾಗೆ, ಕೋತಿ, ನರಿಗಳೆಲ್ಲ ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಹುಲಿ ಇದೆ. 2019ರಲ್ಲಿ ಹುಲಿಯನ್ನು ಆರಿಸಿ ಎಂದು ವಿರೋಧ ಪಕ್ಷಗಳೆಲ್ಲಾ ಒಗ್ಗೂಡುತ್ತಿರುವುದನ್ನು ಈ ರೀತಿ ವಿವರಿಸಿದ್ದರು.