ವಿಧಾನಸೌಧದ ಗೇಟ್ ಬಳಿ ಆತ್ಮಹತ್ಯೆಗೆ ಯತ್ನಿಸಿದ ಉದ್ಯಮಿ
ತನ್ನ ಕೆಲಸವಾಗುವುದಕ್ಕೆ ಶಾಸಕರೊಬ್ಬರಿಗೆ 1 ಕೋಟಿ ರೂಪಾಯಿ ಹಣ ನೀಡಿದ್ದ ಉದ್ಯಮಿ ಜೂ.30 ರಂದು ವಿಧಾನಸೌಧದ ಗೇಟ್ ಮುಂಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರು: ತನ್ನ ಕೆಲಸವಾಗುವುದಕ್ಕೆ ಶಾಸಕರೊಬ್ಬರಿಗೆ 1 ಕೋಟಿ ರೂಪಾಯಿ ಹಣ ನೀಡಿದ್ದ ಉದ್ಯಮಿ ಜೂ.30 ರಂದು ವಿಧಾನಸೌಧದ ಗೇಟ್ ಮುಂಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದಕ್ಕಾಗಿ ಕೆಂಗಲ್ ಹನುಮಂತಯ್ಯ ಗೇಟ್ ಬಳಿ ಕಾರು ನಿಲ್ಲಿಸಿ ಕಾಯುತ್ತಿದ್ದ ಉದ್ಯಮಿ ಏಕಾಏಕಿ ವಿಷ ಸೇವನೆ ಮಾಡುತ್ತಿರುವುದನ್ನು ಗಮನಿಸಿರುವ ಪಾದಚಾರಿಗಳು ಉದ್ಯಮಿಯನ್ನು ತಕ್ಷಣವೇ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. " ಮಧ್ಯಾಹ್ನ 12.15 ರ ವೇಳೆಗೆ ಉದ್ಯಮಿ ಗಂಗಾಧರ್ (38) ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಕೆಂಗಲ್ ಹನುಮಂತಯ್ಯ ಗೇಟ್ ಬಳಿ ಕಾಯುತ್ತಿದ್ದರು. ಈ ನಡುವೆ ಏಕಾಏಕಿ ವಿಷ ಸೇವಿಸುತ್ತಿದ್ದುದ್ದನ್ನು ಸ್ಥಳೀಯರು ಗಮನಿಸಿದ್ದಾರೆ, ಆತ್ಮಹತ್ಯೆಗೆ ಯತ್ನಿಸಿದ ಉದ್ಯಮಿಯನ್ನು ಆಸ್ಪತ್ರೆ ದಾಖಲಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಉದ್ಯಮಿ ತನ್ನ ಕೆಲಸ ಮಾಡಿಕೊಡಲು ಎಂಎಲ್ಎ ಒಬ್ಬರಿಗೆ 1 ಕೋಟಿ ರೂಪಾಯಿ ನೀಡಿದ್ದರು ಆದರೆ ಕೆಲಸ ಮಾಡಿಕೊಡಲು ಶಾಸಕ ವಿಫಲನಾಗಿದ್ದರಿಂದ ಆತ ಉದ್ಯಮಿಯನ್ನು ಭೇಟಿ ಮಾಡಲು ಹಿಂದೇಟು ಹಾಕುತ್ತಿದ್ದ ಅಷ್ಟೇ ಅಲ್ಲದೇ ಉದ್ಯಮಿಯ ಹಣವನ್ನೂ ವಾಪಸ್ ನೀಡಿರಲಿಲ್ಲ, ಇದರಿಂದ ಮನನೊಂದು ಉದ್ಯಮಿ ಆತ್ಮಹತ್ಯೆಗೆ ಯತ್ನಿಸಿರುವುದು ಪ್ರಾಥಮಿಕ ಹಂತದ ವಿಚಾರಣೆಯ ಮೂಲಕ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.