ದೇಶ

ಪ್ರಕರಣಗಳ ಚೌಕಾಶಿ: ಇಡಿ ಅಧಿಕಾರಿಗಳ ಆರೋಪ ಅಲ್ಲಗಳೆದ ವಿಜಯ್ ಮಲ್ಯ

Sumana Upadhyaya

ನವದೆಹಲಿ: ತಮ್ಮ ಮೇಲಿನ ಹಲವು ಆರೋಪ ಪ್ರಕರಣಗಳಲ್ಲಿ ಕೆಲವನ್ನು ಕೈಬಿಡಬೇಕೆಂದು ಚೌಕಾಶಿ ಮಾಡಿ ಮನವಿ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಡಿರುವ ಆರೋಪವನ್ನು ಮದ್ಯದ ದೊರೆ ವಿಜಯ್ ಮಲ್ಯ ನಿರಾಕರಿಸಿದ್ದಾರೆ.

ನಾನು ಮನವಿ ಚೌಕಾಶಿ ಮಾಡುತ್ತಿದ್ದೇನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಧಿಕಾರಿಗಳು ಮೊದಲು ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯನ್ನು ಓದಲಿ ಎಂಬುದು ನನ್ನ ಸವಿನಯ ಸಲಹೆಯಾಗಿದೆ. ನನ್ನ ಆಸ್ತಿಯ ಲೆಕ್ಕ ತೋರಿಸಿದ ನ್ಯಾಯಾಲಯದ ಎದುರು ಅದೇ ಮನವಿಯನ್ನು ಮಂಡಿಸಲಿ ಎಂದು ನಾನು ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನು ಕೇಳುತ್ತೇನೆ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

ಸಾಲ ಮರುಪಾವತಿ ಮಾಡಲು  ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ  ತಮ್ಮ ಆಸ್ತಿಪಾಸ್ತಿ ಮಾರಾಟ ಮಾಡಲು ಅನುಮತಿ ನೀಡುವಂತೆ  ಯುನೈಟೆಡ್  ಬ್ರಿವೆರೀಸ್  ಹೊಲ್ಡಿಂಗ್ ಕಂಪನಿ ಜೂನ್. 22 ರಂದು    ಹೈಕೋರ್ಟ್ ನಲ್ಲಿ  ಮನವಿ ಮಾಡಿಕೊಂಡಿರುವುದಾಗಿ   ಅವರು ಟ್ವೀಟ್  ಸಂದೇಶದಲ್ಲಿ  ತಿಳಿಸಿದ್ದರು. ಅವರು ಹಲವು ಪ್ರಕರಣಗಳಲ್ಲಿ ಕೆಲವನ್ನು ಕೈಬಿಡುವಂತೆ ಚೌಕಾಶಿ ಮಾಡುತ್ತಿದ್ದಾರೆ ಎಂದು ನಿರ್ದೇಶನಾಲಯ ಅಧಿಕಾರಿಗಳು ಆರೋಪ ಮಾಡಿದ್ದರಿಂದ ಮಲ್ಯ ಆಕ್ರೋಶಗೊಂಡು ಈ ಟ್ವೀಟ್ ಮಾಡಿದ್ದಾರೆ ಎಂದು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.

ವಿಜಯ್ ಮಲ್ಯ ಅವರು ಸಲ್ಲಿಸಿದ ಅಫಿಡವಿಟ್ಟಿನ ಯಾವುದೇ ಪ್ರತಿ ತಮಗೆ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT