ದೇಶ

ಮಗುವಿಗೆ ಸ್ತನ್ಯಪಾನ ಚಿತ್ರ ಪ್ರಕಟ: ಮಲಯಾಳಂ ನಿಯತಕಾಲಿಕೆ 'ಗೃಹಲಕ್ಷ್ಮೀ' ವಿರುದ್ಧ ದೂರು ದಾಖಲು!

Srinivasamurthy VN
ತಿರುವನಂತಪುರಂ: ಮಾಡೆಲ್ ವೊಬ್ಬರು ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರ ಪ್ರಕಟಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಮಲಯಾಳಂನ ಖ್ಯಾತ ನಿಯತಕಾಲಿಕೆ 'ಗೃಹಲಕ್ಷ್ಮೀ' ವಿರುದ್ಧ ಇದೀಗ ದೂರು ದಾಖಲಾಗಿದೆ.
ಭಾರತದ ಇತಿಹಾಸದಲ್ಲೇ ಪ್ರಥಮ ಎನ್ನುವಂತೆ ಮಲಯಾಳಂ ಮ್ಯಾಗಜಿನ್ ಗೃಹಲಕ್ಷ್ಮಿ ಮಾಡೆಲ್,  ಕವಯತ್ರಿ ಹಾಗು ಲೇಖಕಿ ಗಿಲು ಜೋಸೆಫ್ ಅವರ ಮಗುವಿಗೆ ಎದೆ ಹಾಲುಣಿಸುವ ಫೋಟೊವನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಈ ಬೆಳವಣೆಗೆ ಹೊಸ ವಿವಾದವೊಂದನ್ನು ಹುಟ್ಟು ಹಾಕಿತ್ತು. 
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ನಿಯತಕಾಲಿಕೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿದ್ದಾರೆ. ಕೊಲ್ಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಕೀಲ ವಿನೋದ್ ಮ್ಯಾಥ್ಯೂ ವಿಲ್ಸನ್ ಎಂಬುವವರು ದೂರು ದಾಖಲಿಸಿದ್ದು, ಇದು ಅಶ್ಲೀಲ ಮತ್ತು ಭಾರತೀಯ ಸಂಸ್ಕೃತಿಗೆ ಮಾಡಿರುವ ಅಪಮಾನ ಎಂದು ದೂರಿನಲ್ಲಿ ಆಕ್ಷೇಪಿಸಿದ್ದಾರೆ.
ಇನ್ನು ವಕೀಲರ ದೂರು ಒಂದೆಡೆಯಾದರೆ ನಿಯತಕಾಲಿಕೆಯ ಪೋಟೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದೆಡೆಯಲ್ಲಿ ಈ ವಿಶೇಷ ಪ್ರಯತ್ನಕ್ಕೆ ಹಾಗೂ ಮಾಡೆಲ್ ನ ಧೈರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಸಾರ್ವಜನಿಕವಾಗಿ ಎಲ್ಲರೂ ನೋಡುವ ಮ್ಯಾಗಜಿನ್ ನಲ್ಲಿ ಈ ರೀತಿಯ ಫೋಟೊ ಸಲ್ಲದು ಎನ್ನುವ ಅಭಿಪ್ರಾಯಗಳೂ ಕೇಳಿ ಬರುತ್ತಿವೆ.
SCROLL FOR NEXT