ಸಂಗ್ರಹ ಚಿತ್ರ 
ದೇಶ

ರಾಜಕೀಯದಲ್ಲಿ ರಾಹುಲ್ ಇನ್ನೂ ನರ್ಸರಿ, ಅಮಿತ್ ಶಾ ಸ್ನಾತಕೋತ್ತರ ಪದವಿಧರ: ಬಿಜೆಪಿ ಮುಖಂಡ ಹಿಮಂತ ಬಿಸ್ವಾ

ರಾಜಕೀಯದಲ್ಲಿ ರಾಹುಲ್ ಇನ್ನೂ ನರ್ಸರಿ ವಿದ್ಯಾರ್ಥಿ, ಅಮಿತ್ ಶಾ ಸ್ನಾತಕೋತ್ತರ ಪದವಿದರರಾಗಿದ್ದಾರೆ ಎಂದು ತ್ರಿಪುರಾ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅಗರ್ತಲಾ: ರಾಜಕೀಯದಲ್ಲಿ ರಾಹುಲ್ ಇನ್ನೂ ನರ್ಸರಿ ವಿದ್ಯಾರ್ಥಿ, ಅಮಿತ್ ಶಾ ಸ್ನಾತಕೋತ್ತರ ಪದವಿದರರಾಗಿದ್ದಾರೆ ಎಂದು ತ್ರಿಪುರಾ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಇಂದು ನಡೆದ ತ್ರಿಪುರಾ ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಂತಾ ಅವರು, ರಾಜಕೀಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಹೋಲಿಕೆ ಮಾಡುವುದು ಸರಿಯಲ್ಲ. ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ಗಾದಿ ಹಿಡಿದಿರುವ ರಾಹುಲ್ ಗಾಂಧಿಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೂ ಹೋಲಿಕೆ ಬೇಡ ಎಂದು ಹೇಳಿದ್ದಾರೆ.
ಅಂತೆಯೇ ರಾಜಕೀಯದಲ್ಲಿ ರಾಹುಲ್ ಗಾಂಧಿ ಇನ್ನೂ ನರ್ಸರಿ ವಿದ್ಯಾರ್ಥಿಯಾಗಿದ್ದು, ಅಮಿತ್ ಶಾ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಎಂದು ಬಿಸ್ವಾ ಕಾಂಗ್ರೆಸ್ ಗೆ ಟಾಂಗ್ ನೀಡಿದರು. ರಾಜಕೀಯ ನಿರ್ವಹಣಾ ಸಾಮರ್ಥ್ಯದಲ್ಲಿ ರಾಹುಲ್ ಗಾಂಧಿಗೂ ಅಮಿತ್ ಶಾ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ. ತ್ರಿಪುರಾ ಚುನಾವಣೆ ಇದಕ್ಕೊಂದ ಸ್ಪಷ್ಚ ನಿದರ್ಶನವಾಗಿದ್ದು, ತ್ರಿಪುರಾದಲ್ಲಿ ಖಂಡಿತಾ ಬಿಜೆಪಿ 45 ಸ್ಥಾನಗಳನ್ನು ಗಳಿಸಲಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ರಚನೆ ಮಾಡಲಿದೆ ಎಂದು ಹೇಳಿದರು.
ಸರಿ ಸುಮಾರು ಎರಡು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಹಿಮಂತ ಬಿಸ್ವಾ ಶರ್ಮಾ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 2015ರಲ್ಲಿ ಉಂಟಾದ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟಿನ ಬಳಿಕ ಹಿಮಂತ ಬಿಸ್ವಾ ಶರ್ಮಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ

ಪಂದ್ಯ ಮುಗಿಸಿ ಮನೆಗೆ ಮರಳುವಾಗ ಭೀಕರ ಅಪಘಾತ, 4 ಕ್ರಿಕೆಟಿಗರ ದಾರುಣ ಸಾವು!