ಮುಂಬೈ: ಐಎನ್ಎಕ್ಸ್ ಲಂಚ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಕಾರ್ತಿ ಚಿದಂಬರಂ ಹಾಗೂ ಇಂದ್ರಾಣಿ ಮುಖರ್ಜಿಯನ್ನು ಮುಖಾಮುಖಿಯಾಗಿಸಿದೆ.
ಕಾರ್ತಿ ಚಿದಂಬರಂ ನ್ನು ನವದೆಹಲಿಯಿಂದ ಮುಂಬೈ ಗೆ ಕರೆದೊಯ್ದ ಸಿಬಿಐ ತನಿಖಾ ತಂಡ ಐಎನ್ಎಕ್ಸ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಹಾಗೂ ಇಂದ್ರಾಣಿ ಮುಖರ್ಜಿ ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ. ಕಾರ್ತಿ ಚಿದಂಬರಂ ಶಾಮೀಲಾಗಿದ್ದಾರೆ ಎನ್ನಲಾಗಿರುವ ಡೀಲ್ ಬಗ್ಗೆ ವಿಚಾರಣೆ ವೇಳೆ ಇಂದ್ರಾಣಿ ಮುಖರ್ಜಿ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಲಾಗಿದೆ.
ಕಾರ್ತಿ ಚಿದಂಬರಂ ಐಎನ್ಎಕ್ಸ್ ಮೀಡಿಯಾದಿಂದ ಎಫ್ಐಪಿ ಬಿ ಕ್ಲಿಯರೆನ್ಸ್ ಗಾಗಿ 3.5 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಇಂದ್ರಾಣಿ ಮುಖರ್ಜಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಒಟ್ಟಿಗೆ ವಿಚಾರಣೆಗೊಳಪಡಿಸಲಾಗಿತ್ತು.