ದೇಶ

ಮೇಘಾಲಯದಲ್ಲಿ ಜನಾದೇಶ ನಮ್ಮ ಪರವಾಗಿದೆ: ಕಾಂಗ್ರೆಸ್

Lingaraj Badiger
ಶಿಲ್ಲಾಂಗ್: ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಮೇಘಾಲಯದಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ(ಎನ್‌ಪಿಪಿ) ಮತ್ತು ಅದರ ಮಿತ್ರ ಪಕ್ಷಗಳಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ಜನಾದೇಶ ನಮ್ಮ ಪರವಾಗಿದೆ ಎಂದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಹೇಳಿದೆ.
ನಾವು ಚುನಾವಣಾ ಪೂರ್ವ ಯಾವುದೇ ಮೈತ್ರಿಗಳನ್ನು ಮಾಡಿಕೊಂಡಿಲ್ಲ. ಚುನಾವಣಾ ಪ್ರಚಾರದಿಂದಲೂ ಬಿಜೆಪಿ, ಎನ್ ಪಿಪಿ ಮತ್ತು ಯುಡಿಪಿ ಒಟ್ಟಿಗೆ ಕೆಲಸ ಮಾಡಿದ್ದು, ಈಗ ಒಳ ಒಪ್ಪಂದ ಸಾಬೀತಾಗಿದೆ ಎಂದು ಮೇಘಾಲಾಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ವಿನ್ಸೆಂಟ್ ಪಾಲ ಅವರು ಆರೋಪಿಸಿದ್ದಾರೆ.
ನಾವು ಜನರು ನೀಡಿದ ತೀರ್ಪುನ್ನು ಒಪ್ಪಿಕೊಂಡಿದ್ದೇವೆ. ಮೇಘಾಲಯ ಜನತೆಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ಸರ್ಕಾರ ರಚೆಯ ಹಕ್ಕು ಮಂಡಿಸುವುದು ಸುಲಭ. ಆದರೆ ಸರ್ಕಾರ ನಡೆಸುವುದು ಕಷ್ಟ. ಆಡಳಿತ ಅಥವಾ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತರು ನಾವು ರಚನಾತ್ಮಕ ಪಾತ್ರ ನಿರ್ವಹಿಸುತ್ತೇವೆ ಎಂದಿದ್ದಾರೆ.
ಮೇಘಾಲಯದ ಒಟ್ಟು 59 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆ ಅತೀ ಹೆಚ್ಚು ಅಂದರೆ 21 ಸ್ಥಾನ, ಎನ್ ಪಿಪಿಗೆ 19 ಸ್ಥಾನ, ಬಿಜೆಪಿ 2 ಹಾಗೂ ಇತರರು 17 ಸ್ಥಾನ ಗಳಿಸಿದ್ದಾರೆ. ಆದರೆ ಮೇಘಾಲಯದಲ್ಲಿ ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯತೆ ಇದ್ದು, ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ಬಹುಮತ ಇಲ್ಲ. 
SCROLL FOR NEXT