ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗ (ಎಸ್ .ಎಸ್ . ಸಿ) ತಾನು ಫೆ.21ರಂದು ನಡೆಸಿದ್ದ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸ್ ಮಾಡಲು ನಿರ್ಧರಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳು ಇಂದು ದೆಹಲಿ ಬಿಜೆಪಿ ಸಂಸದರಾದ ಮನೋಜ್ ತಿವಾರಿ ಅವರೊಡನೆ ಎಸ್ .ಎಸ್ . ಸಿ ಅಧ್ಯಕ್ಷ ಅಶೀಮ್ ಖುರಾನಾ ಅವರನ್ನು ಭೇಟಿಯಾಗಿದ್ದಾರೆ. ಆ ವೇಳೆ ಅವರು ಖುರಾನಾ ಅವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ. ಅದರಲ್ಲಿ ಅವರು ಫೆ.17ರಿಂದ 22ರವರೆಗೆ ನಡೆದಿದ್ದ ಕಂಬೈನಡ್ ಗ್ರ್ಯಾಜುಯೇಟ್ ಲೆವೆಲ್ (ಟೈರ್ II) ಪರೀಕ್ಷೆಗಳಲ್ಲಿ ಮಡೆದಿದ್ದ ಉತ್ತರ ಪತ್ರಿಕೆ ಸೋರಿಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.
"ಪ್ರಕರಣದ ಬಗೆಗೆ ಸಿಬಿಐ ತನಿಖೆ ನಡೆಸುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಶಿಫಾರಸು ಮಾಡಲು ಆಯೋಗವು ಸಮ್ಮತಿಸಿದೆ" ಎಂದು ಖುರಾನಾ ಹೇಳಿದ್ದಾರೆ.
ಇದಕ್ಕೂ ಮುನ್ನ ಸಂಸದ ತಿವಾರಿ ಪ್ರತಿಭಟನಾ ನಿರತ ಅಭ್ಯರ್ಥಿಗಳೊಡನೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ಅಭ್ಯರ್ಥಿಗಳ ಮಹತ್ವಾಕಾಂಕ್ಷೆ, ಅವರಲ್ಲಿನ ತಳಮಳದ ಕುರಿತಂತೆ ತಿಳಿಸಿದ್ದರು.
ಫೆ.27ರಿಂದ ಈಚೆಗೆ ದೆಹಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಎಸ್.ಎಸ್.ಸಿ.ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಇದೀಗ ಎಸ್.ಎಸ್.ಸಿ ಪ್ರತಿಭಟನಾಕಾರರ ಮನವಿಯನ್ನು ಪುರಸ್ಕರಿಸಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಳ ದರ್ಜೆಯ ಹುದ್ದೆಗಳಿಗಾಗಿ ಎಸ್.ಎಸ್.ಸಿ ಪರೀಕ್ಷೆ ನಡೆಸುತ್ತಿದೆ,