ಲಖನೌ: ರಾಜ್ಯಸಭಾ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥರಾದ ಮಾಯಾವತಿ ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಉತ್ತರ ಪ್ರದೇಶದ ಫುಲ್ ಪುರ್ ಮತ್ತು ಗೋರಖ್ ಪುರ ಉಪಚುನಾವಣೆಯಲ್ಲಿ ಪ್ರಬಲ ಬಿಜೆಪಿ ವಿರೋಧಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಘೋಷಣೆ ಮಾಡಿದೆ. ಆ ಮೂಲಕ ಈ ಹಿಂದೆ ಅಂದರೆ 2017 ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಕ್ಷೇತ್ರಗಳನ್ನು ಮರಳಿ ಪಡೆಯಲು ಉಭಯ ಪಕ್ಷಗಳು ಹರಸಾಹಸ ಮಾಡುತ್ತಿವೆ.
ಮೂಲಗಳಪ್ರಕಾರ, ಎಸ್ ಪಿಯ ನಾಗೇಂದ್ರ ಸಿಂಗ್ ಪಟೇಲ್ ರನ್ನು ಫುಲ್ ಪುರ್ ನಲ್ಲಿ ಹಾಗೂ ಪ್ರವೀಣ್ ಕುಮಾರ್ ರನ್ನು ಗೋರಖ್ ಪುರದಲ್ಲಿ ಮಾಯಾವತಿ ನೇತೃತ್ವದ ಬಿಎಸ್ ಪಿ ಬೆಂಬಲಿಸಲಿದೆ. ಈ ಮೂಲಕ ಬಿಜೆಪಿಯನ್ನು ಸೋಲಿಸಲಾಗುವುದು ಎಂದು ಬಿಎಸ್ ಪಿ ನಾಯಕರು ತಿಳಿಸಿದ್ದಾರೆ. ಇನ್ನು ಲಖನೌನ ಮಾಯಾವತಿ ನಿವಾಸದಲ್ಲಿ ನಡೆದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದ್ದು, ಇದೇ ಮಾರ್ಚ್ 11ರಂದು ಫೂಲ್ಪುರ್ ಹಾಗು ಗೋರಖ್ ಪುರದಲ್ಲಿ ಉಪಚುನಾವಣೆ ನಡೆಯಲಿದೆ.
ಮತ್ತೊಂದು ಮೂಲಗಳ ಪ್ರಕಾರ ಬಿಎಸ್ ಪಿ ನಾಯಕಿ ತಮ್ಮ ರಾಜ್ಯಸಭೆ ಸ್ಥಾನ ಉಳಿಸಿಕೊಳ್ಳುವ ಸಲುವಾಗಿಯೂ ಎಸ್ ಪಿ ಪಕ್ಷದೊಂದಿಗೆ ಚರ್ಚೆ ನಡೆಸಿದ್ದು, ರಾಜ್ಯಸಭೆ ಚುನಾವಣೆ ವೇಳೆ ಬೆಂಬಲ ಪಡೆಯುವ ಕುರಿತು ಚರ್ಚಿಸಿದ್ದಾರ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics