ನವದೆಹಲಿ: ಗ್ರಾಮೀಣ ಭಾಗದ ಮಹಿಳೆಯರಿಗೆ ಬಯೋ ಡಿಗ್ರೆಡಬಲ್(ಜೈವಿಕ ವಿಘಟನೀಯ ಪ್ಯಾಡ್) ಪ್ಯಾಡ್ ಗಳು ತಲುಪುವಂತೆ ಮಾಡಲು ಅಭಿಯಾನವನ್ನು ಪ್ರಾರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯಲ್ ಹೇಳಿದ್ದಾರೆ.
ಎಲ್ಲಾ ಮಹಿಳೆಯರಿಗೂ ಬಯೋ ಡಿಗ್ರೆಡಬಲ್ ಸ್ಯಾನಿಟರಿ ಪ್ಯಾಡ್ ಗಳು ತಲುಪುವಂತೆ ಮಾಡಲು ದೇಶಾದ್ಯಂತ ಅಭಿಯಾನವನ್ನು ಆಯೋಜಿಸಬೇಕಿದೆ, ಈ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ 8,000 ರೈಲು ನಿಲ್ದಾಣಗಳಲ್ಲಿ ಜೈವಿಕ ವಿಘಟನೀಯ ಪ್ಯಾಡ್ ಗಳಾನ್ನು ನೀಡಲು ಚಿಂತನೆ ನಡೆಸಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮನೇಕಾ ಗಾಂಧಿ ಅವರೊಂದಿಗೆ ಚರ್ಚಿಸುತ್ತಿರುವುದಾಗಿ ಪಿಯೂಷ್ ಗೋಯಲ್ ತಿಳಿಸಿದ್ದಾರೆ.