ಕಾಂರ್ತಿ ಚಿದಂಬರಂಗೆ ನಾರ್ಕೋ ಪರೀಕ್ಷೆ, ದೆಹಲಿ ನ್ಯಾಯಾಲಯದ ಅನುಮತಿ ಕೇಳಿದ ಸಿಬಿಐ
ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಗೆ ನಾರ್ಕೊ ಅನಾಲಟಿಕ್ಸ್ ಪರೀಕ್ಷೆ ನಡೆಸಲು ಅನುಮತಿ ಕೋರಿ ಸಿಬಿಐ ದೆಹಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಕಾರ್ತಿ ಚಿದಂಬರಂ ಅವರ ಚಾರ್ಟರ್ಡ್ ಅಕೌಂಟೆಂಟ್ ಎಸ್. ಭಾಸಕರ ರಾವ್ ನಡೆಸಿದ್ದಾರೆನ್ನಲಾದ ಅಕ್ರಮ ಹಣದ ವರ್ಗಾವಣೆ, ಇಂದ್ರಾಣಿ ಮುಖರ್ಜಿಸಂಬಂಧಿತ ಪ್ರಕರಣ ದ ಅರ್ಜಿಗಳು ಮಾ.9ರಂದು ವಿಚಾರಣೆಗೆ ಬರಲಿದೆ. ಅದೇ ದಿನದಂದು ಸಿಬಿಐ ನ ಪ್ರಸ್ತುತ ಮನವಿಯನ್ನೂ ಪರಿಶೀಲನೆ ನಡೆಸಲಾಗುತ್ತದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸುನೀಲ್ ರಾಣಾ ಹೇಳಿದ್ದಾರೆ.
ಕಾರ್ತಿ ಚಿದಂಬರಂ ಅವರನ್ನು ಇನ್ನೂ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದ್ದು ಪ್ರಕರಣದ ಸತ್ಯಾಸತ್ಯತೆಯ ಕುರಿತ ಪುರಾವೆಗಳನ್ನು ಪಡೆದುಕೊಳ್ಳಲು ನಿರಂತರ ತನಿಖೆ ಅಗತ್ಯವೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.