ಸೋನ್ವಾರ್: ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ 79ನೇ ಬೆಟಾಲಿಯನ್ ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಖ್ ದೇವ್ ಆತ್ಮಹತ್ಯೆ ಮಾಡಿಕೊಂಡ ಸೈನಿಕ. ಮಾರ್ಚ್ 8 ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸುಖದೇವ್ ತಮ್ಮ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಸೇನಾ ಕ್ಯಾಂಪ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
18 ರಾಷ್ಟ್ರೀಯ ರೈಫಲ್ಸ್ ನ 31 ವರ್ಷದ ಸುಖದೇವ ಸಾವಿಗೆ ಶರಣಾಗಿದ್ದಾರೆ, ಮಾರ್ಚ್ 7 ರಂದು ರಾಷ್ಟ್ರೀಯ ರೈಫಲ್ಸ್ ನ ಸೆಪೋಯ್ ಬಿರೇಂದರ್ ಸಿನ್ಹಾ ಕೂಡ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.