ಸಂಗ್ರಹ ಚಿತ್ರ 
ದೇಶ

ಇದು ಪ್ರಜಾಪ್ರಭುತ್ವ, ಮಧ್ಯ ಯುಗದ ಯುದ್ಧವಲ್ಲ: ತಸ್ಲೀಮಾ ನಸ್ರಿನ್

ತ್ರಿಪುರಾ ಚುನಾವಣಾ ಫಲಿತಾಂಶ ಘೋಷಣೆ ಬಳಿಕ ಲೆನಿನ್ ಪ್ರತಿಮೆ ಮೇಲಿನ ದಾಳಿಯನ್ನು ಖಂಡಿಸಿರುವ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರಿನ್ ಅವರು, ಇದು ಪ್ರಜಾಪ್ರಭುತ್ವ, ಮಧ್ಯ ಯುಗದ ಯುದ್ಧವಲ್ಲ ಎಂದು ಹೇಳಿದ್ದಾರೆ.

ನವದೆಹಲಿ: ತ್ರಿಪುರಾ ಚುನಾವಣಾ ಫಲಿತಾಂಶ ಘೋಷಣೆ ಬಳಿಕ ಲೆನಿನ್ ಪ್ರತಿಮೆ ಮೇಲಿನ ದಾಳಿಯನ್ನು ಖಂಡಿಸಿರುವ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರಿನ್ ಅವರು, ಇದು ಪ್ರಜಾಪ್ರಭುತ್ವ, ಮಧ್ಯ ಯುಗದ ಯುದ್ಧವಲ್ಲ ಎಂದು ಹೇಳಿದ್ದಾರೆ.
ರೀಡರ್ಸ ಡೈಜೆಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ತಸ್ಲೀಮಾ ನಸ್ರಿನ್ ಅವರು, ಜನರಿಗೆ ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗುತ್ತಿಲ್ಲ. ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಮೆಗಳನ್ನು ಭಗ್ನಗೊಳಿಸುತ್ತಿದ್ದಾರೆ. ಅದರೆ ಇದು ಸರಿಯಲ್ಲ. ಇದು ಪ್ರಜಾಪ್ರಭುತ್ವ, ಮಧ್ಯ ಯುಗದ ಯುದ್ಧವಲ್ಲ ಎಂದು ತಸ್ಲೀನಾ ಹೇಳಿದ್ದಾರೆ.
ಈ ಹಿಂದೆ ಅಂದರೆ ಮಧ್ಯಯುಗದಲ್ಲಿ ಯುದ್ಧ ಗೆದ್ದವರು ಸೋತವರ ಮನೆ-ಮಠಗಳ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕದ್ದನ್ನು ದೋಚುತ್ತಿದ್ದರು. ಇತ್ತೀಚೆಗೆ ನಡೆದ ತ್ರಿಪುರಾ ಘಟನೆ ಕೂಡ ಅದನ್ನೇ ನೆನಪಿಸುವಂತಿತ್ತು. ಅದು ಇತಿಹಾಸದ ಕರಾಳ ಪುಟಗಳು.. ಅವೆಲ್ಲವೂ ಗತಿಸಿ ಹೋಗಿವೆ. ಅದನ್ನೇ ಪುನಾರಾವರ್ತಿಸುವುದು ಅನಾಗರಿಕತೆ. ತ್ರಿಪುರಾ ಘಟನೆ ಕೂಡ ಇದಕ್ಕೆ ಹೊರತಾಗಿಲ್ಲ. ಲೆನಿನ್ ಸಿದ್ಧಾಂತ ನಿಮಗಿಷ್ಟವಿಲ್ಲ ಎಂದಾದಲ್ಲಿ ಅದನ್ನು ಬೆಂಬಲಿಸಬೇಡಿ ಮತ್ತು ಅದನ್ನು ಅನುಕರಿಸಬೇಡಿ. ಅದನ್ನು ಬಿಟ್ಟು ಅವರ ಪ್ರತಿಮೆಗಳ ಮೇಲೆ ದಾಳಿ ಮಾಡಬಾರದು.  ಪ್ರತಿಮೆಗಳ ಮೇಲೆ ದಾಳಿ ಮಾಡುವ ಮೂಲಕ ನಿಮ್ಮ ಸಿದ್ಧಾಂತಗಳನ್ನು ಜಗ್ಗಜಾಹೀರು ಮಾಡಿದ್ದೀರಿ ಎಂದು ತಸ್ಲೀಮಾ ನಸ್ರಿನ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಣೆ ಬಳಿಕ ಬಿಜೆಪಿ ಕಾರ್ಯಕರ್ತರು ತ್ರಿಪುರಾದಲ್ಲಿದ್ದ ಕಮ್ಯುನಿಸ್ಟ್ ವಾದಿ ಲೆನಿನ್ ಪ್ರತಿಮೆಯನ್ನು ಧ್ವಂಸ ಮಾಡಿದ್ದರು. ಈ ಘಟನೆ ಬಳಿಕ ದೇಶದಲ್ಲಿ ಇಂತಹುದೇ ಹಲವು ಘಟನೆಗಳು ನಡೆದು, ಪೆರಿಯಾರ್, ಅಂಬೇಡ್ಕರ್, ಗಾಂಧಿ ಮತ್ತು ಹನುಮನ ವಿಗ್ರಹಗಳ ಮೇಲೆ ದಾಳಿ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT