ಕಮಲ್ ಹಾಸನ್ 
ದೇಶ

ಇಂದು ಮಹಿಳೆಯರನ್ನು ಕಾಣುತ್ತಿರುವ ರೀತಿ ನಾಚಿಕೆ ಹುಟ್ಟಿಸುತ್ತದೆ: ಕಮಲ್ ಹಾಸನ್

ತಮಿಳುನಾಡಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನಟ ಹಾಗೂ ರಾಜಕಾರಣಿ ...

ಚೆನ್ನೈ: ತಮಿಳುನಾಡಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ಮಹಿಳೆಯರನ್ನು ಇಲ್ಲಿ ಕಾಣುತ್ತಿರುವ ರೀತಿ ನಾಚಿಕೆ  ಹುಟ್ಟಿಸುತ್ತಿದೆ ಎಂದು ಹೇಳಿದ್ದಾರೆ.

ಇರೋದ್ ನಲ್ಲಿ ಮಾತನಾಡಿದ ಅವರು, ತಮ್ಮ ಮಕ್ಕಳ್ ನಿದಿ ಮೈಯಮ್ ಪಕ್ಷಕ್ಕೆ ಕ್ರಿಸ್ತಿಯನ್ ಮಿಷನರಿಗಳು ಹಣ ಒದಗಿಸಿವೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.
ಕ್ರಿಸ್ತಿಯನ್ ಮಿಷನರಿಗಳಿಂದ ಹಣ ಸಂಗ್ರಹಿಸಿದ್ದೇನೆ ಎಂದು ಆರೋಪಿಸುತ್ತಾರೆ. ಇದು ಸತ್ಯಕ್ಕೆ ದೂರವಾದ ಆರೋಪವಾಗಿರುವುದರಿಂದ ನಾನು ಈ ವಿಷಯಕ್ಕೆ ನಗುತ್ತೇನೆ ಎಂದು ಹೇಳಿದ್ದಾರೆ.

ನಟರು ರಾಜಕಾರಣಿಗಳಾಗುವುದು ಎಂಬ ವಿಷಯ ಅಲ್ಲ ಇಲ್ಲಿ ಮುಖ್ಯ, ಸಂಬಂಧಪಟ್ಟ ನಾಗರಿಕರು ಇಲ್ಲಿ ಒಳಗೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ, ಇಂದು ಮಹಿಳೆಯರನ್ನು ಕಾಣುತ್ತಿರುವ ರೀತಿ ನಾಚಿಕೆ ಹುಟ್ಟಿಸುತ್ತದೆ ಎಂದರು.

ತಾವು ತಮಿಳಿನಾಡಿನಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕೆಂದು ಹೇಳಿರಲಿಲ್ಲ. ಮದ್ಯದಂಗಡಿಗಳು ಹೆಚ್ಚುತ್ತಿರುವ ಬಗ್ಗೆ ಪರೀಕ್ಷೆ  ನಡೆಸಬೇಕು. ಈ ಪ್ರಮಾಣದಲ್ಲಿ ಮದ್ಯದಂಗಡಿ ಹರಡಬೇಕೆ, ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ. ತಮಿಳಿನಾಡಿನಲ್ಲಿ ಅಂಚೆ ಕಚೇರಿ ಬೇಕೆಂದರೆ ಹುಡುಕಬೇಕು, ಅದೇ ಮದ್ಯದಂಗಡಿ ಬೇಕೆಂದರೆ ಹುಡುಕಬೇಕಾಗಿಲ್ಲ. ಈ ಪರಿಸ್ಥಿತಿ ಬದಲಾಗಬೇಕಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಪ್ರಮುಖ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದಾರೆ. ತಮಿಳು ಮ್ಯಾಗಜಿನ್ ಆನಂದ್ ವಿಕಟನ್ ನಲ್ಲಿ ಕಮಲ್ ಹಾಸನ್ ತಮ್ಮ ಈ ಅಭಿಪ್ರಾಯವನ್ನು ಹೇಳಿದ್ದಾರೆ. ಎಲ್ಲಾ ವರ್ಗದ ಜನರಿಗೆ ಮದ್ಯ ಬೇಡವೆಂದು ಸಂಪೂರ್ಣವಾಗಿ ನಿಷೇಧಿಸುವುದು ಅಸಾಧ್ಯ ಎಂದು ಕೂಡ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ